ಮುಂಬೈ: ವರುಣ್ ಧವನ್(Varun Dhawan) ಅಭಿನಯದ ಮುಂಬರುವ ಚಿತ್ರ ‘ಬೇಬಿ ಜಾನ್'(Baby John) ಪ್ರಮೋಷನ್‌ಗಾಗಿ ಚಲನಚಿತ್ರ ನಿರ್ದೇಶಕ ಅಟ್ಲಿ(Atlee) ಶನಿವಾರ(ಡಿ.14) ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ(The Great Indian Kapil Show) ಕಾಣಿಸಿಕೊಂಡಿದ್ದಾರೆ.(Kapil Sharma Show). ಈ ವಾರದ ಎಪಿಸೋಡ್‌ನಲ್ಲಿ(Episode) ಕಾರ್ಯಕ್ರಮವನ್ನು ನಡೆಸಿಕೊಡುವ ಹಾಸ್ಯ ನಟ ಕಪಿಲ್ ಶರ್ಮಾ ಅವರು ಅಟ್ಲಿ ಲುಕ್ ಕುರಿತು ವ್ಯಂಗ್ಯದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಕಪಿಲ್ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ.
ಮಾತಿನ ಮಧ್ಯೆ ಕಪಿಲ್ ಶರ್ಮಾ “ನೀವು ಸ್ಟಾರ್‌ಗಳನ್ನು ಭೇಟಿ ಮಾಡಲು ಹೋದಾಗ ಅವರು ನಿಮ್ಮನ್ನು ಗುರುತು ಹಿಡಿಯುತ್ತಾರಾ? “ಎಂದು ಕೇಳಿದ್ದಾರೆ. ತಕ್ಷಣವೇ ಅವರ ಮಾತಿಗೆ ಉತ್ತರ ನೀಡಿರುವ ಅಟ್ಲಿ “ನೋಟದಿಂದ ವ್ಯಕ್ತಿತ್ವವನ್ನು ಅಳೆಯಬಾರದು. ನೋಟಕ್ಕಿಂತ ಹೃದಯ ಮುಖ್ಯ” ಎಂದಿದ್ದಾರೆ. ಅಟ್ಲಿ ಮಾತು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು,ನೆಟ್ಟಿಗರು ಅಟ್ಲಿಯನ್ನು ಬಹುವಾಗಿ ಮೆಚ್ಚಿಕೊಂಡು ಹೊಗಳಿದ್ದಾರೆ. ಇನ್ನು ಕೆಲವರು ಕಪಿಲ್ ಶರ್ಮಾ ಉದ್ಧಟತನ ತೋರಿದ್ದಾರೆ. ಅಟ್ಲಿ ಅವರನ್ನು ಅವಮಾನ ಮಾಡಲೆಂದೇ ಈ ಪ್ರಶ್ನೆಯನ್ನು ಕೇಳಿದ್ದಾರೆ ಎಂದಿದ್ದಾರೆ.
Kapil Sharma subtly insults Atlee's looks?
— Surajit (@surajit_ghosh2) December 15, 2024
Atlee responds like a boss: Don't judge by appearance, judge by the heart.#Atlee #KapilSharma pic.twitter.com/oSzU0pRDS4
ಟಾಕ್ ಶೋನಲ್ಲಿ ಕಪಿಲ್ ಶರ್ಮಾ ಅವರು ಕೇಳಿದ ದಿಢೀರ್ ಪ್ರಶ್ನೆಗೆ ಅಟ್ಲಿ ಸ್ವಲ್ಪ ಅವಾಕ್ಕಾದರೂ ಜಾಣ್ಮೆಯಿಂದ ಉತ್ತರಿಸಿದ್ದಾರೆ. “ಸರ್, ನಿಮ್ಮ ಪ್ರಶ್ನೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ.ನಾನು ಉತ್ತರಿಸಲು ಪ್ರಯತ್ನಿಸುತ್ತೇನೆ. ಎ.ಆರ್ ಮುರುಗದಾಸ್ ಸರ್ ಅವರು ನನ್ನ ಮೊದಲ ಚಿತ್ರವನ್ನು ನಿರ್ಮಿಸಿದ ಕಾರಣಕ್ಕೆ ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ಅವರು ಚಿತ್ರ ಕಥೆಯನ್ನು ಕೇಳಿದರು, ಆದರೆ ನಾನು ಹೇಗೆ ಕಾಣುತ್ತಿದ್ದೇನೆ ಮತ್ತು ಎಷ್ಟು ಸಮರ್ಥನಾಗಿದ್ದೇನೆ ಎಂಬುದನ್ನು ಅವರು ನೋಡಲಿಲ್ಲ. ಅವರು ನನ್ನ ಕಥೆಯನ್ನು ಇಷ್ಟಪಟ್ಟಿದ್ದಾರೆ. ನಾವು ನೋಟದಿಂದ ಏನನ್ನೂ ನಿರ್ಣಯಿಸಬಾರದು, ನಾವು ಹೃದಯದಿಂದ ನಿರ್ಣಯಿಸಬೇಕು” ಎಂದು ಅಟ್ಲಿ ಹೇಳಿದ್ದಾರೆ. ಅವರ ಮಾತಿಗೆ ಅಲ್ಲಿದ್ದ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.
ಎಪಿಸೋಡ್‌ನ ವಿಡಿಯೊ ಕ್ಲಿಪ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವರು ಅಟ್ಲಿ ಅವರನ್ನು ಅಪಮಾನಿಸಲು ಕಪಿಲ್ ಶರ್ಮಾ ಈ ರೀತಿಯ ಅಸಂಬದ್ಧ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಸುದ್ದಿಯನ್ನೂ ಓದಿ:Chhattisgarh Accident: ಕಾರು-ಲಾರಿ ಡಿಕ್ಕಿ: 6 ಮಂದಿಯ ದಾರುಣ ಸಾವು- 7 ಜನರಿಗೆ ಗಂಭೀರ ಗಾಯ