Friday, 22nd November 2024

ತಾರತಮ್ಯರಹಿತ ಆಡಳಿತ ನಡೆಸುವ ಮೂಲಕ ಜನರ ಹೃದಯ ಗೆಲ್ಲಬೇಕು: ಕಪಿಲ್ ಸಿಬಲ್

ನವದೆಹಲಿ: ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿ ಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಮುಂದಿನ ಐದು ವರ್ಷಗಳ ಕಾಲ ರಾಜ್ಯದಲ್ಲಿ ಪ್ರಾಮಾಣಿಕ ಮತ್ತು ತಾರತಮ್ಯರಹಿತವಾಗಿ ಆಡಳಿತ ನಡೆಸುವ ಮೂಲಕ ಜನರ ಹೃದಯ ಗೆಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
“ಕರ್ನಾಟಕ ಚುನಾವಣೆ ಗೆಲ್ಲುವುದು ಕಠಿಣ. ಜನರ ಹೃದಯ ಗೆಲ್ಲುವುದು ಕಠಿಣ! ಮುಂದಿನ 5 ವರ್ಷಗಳ ಕಾಲ ಮುಕ್ತ, ಪ್ರಾಮಾಣಿಕ, ತಾರತಮ್ಯರಹಿತರಾಗಿ ಜನರ ಹೃದಯ ಗೆಲ್ಲಿರಿ” ಎಂದು ಸಲಹೆ ನೀಡಿದ್ದು, ಇದ್ಯಾವುದೂ ಇಲ್ಲದ ಕಾರಣ ಬಿಜೆಪಿ ಸೋತಿದೆ ಎಂದಿದ್ದಾರೆ.

ಪ್ರಧಾನಿ ಸೋತರು, ಕರ್ನಾಟಕದ ಜನರು ಗೆದ್ದಿದ್ದಾರೆ. ಇಲ್ಲ: 40% ಭ್ರಷ್ಟಾಚಾರ, ಕೇರಳ ಕಥೆ, ವಿಭಜಕ ರಾಜಕೀಯ, ದುರಹಂಕಾರ, ಸುಳ್ಳು. ಕಾಂಗ್ರೆಸ್ ಗೆಲುವಿಗೆ ನೆರವಾಗಿವೆ ಎಂದು ಹೇಳಿದ್ದರು.

ಯುಪಿಎ 1 ಮತ್ತು 2 ರ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಸಿಬಲ್ ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ತೊರೆದು ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಸದಸ್ಯರಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.