Sunday, 15th December 2024

Karishma Kapoor:‘ಇಂಡಿಯಸ್ ಬೆಸ್ಟ್ ಡ್ಯಾನ್ಸರ್’ ಕಾರ್ಯಕ್ರಮದಲ್ಲಿ ಕರೀನಾ ಕಪೂರ್‌ ಹಾಡು ನೋಡಿ ಸಿಟ್ಟಿಗೆದ್ದು ಹೊರನಡೆದ ಕರಿಷ್ಮಾ ಕಪೂರ್!

Karishma Kapoor

ಮುಂಬೈ : ಬಾಲಿವುಡ್ ನಟಿ ಕರಿಷ್ಮಾ ಕಪೂರ್ ‘ಇಂಡಿಯಸ್ ಬೆಸ್ಟ್ ಡ್ಯಾನ್ಸರ್’ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ತೀರ್ಪುಗಾರರ ಸೀಟಿನಲ್ಲಿ ಕುಳಿತ ಕರೀನಾ ಕಪೂರ್ ಅವರು ಅವರ ಹೊಸ ಹಾಡಿಗೆ ಇಬ್ಬರು ಹುಡುಗರು ಪ್ರದರ್ಶನ ನೀಡುವುದನ್ನು ನೋಡಿದ ನಂತರ ಕರಿಷ್ಮಾ ಕಪೂರ್ ‘ಇಂಡಿಯಸ್ ಬೆಸ್ಟ್ ಡ್ಯಾನ್ಸರ್’ ಸೆಟ್ ನಿಂದ ಹೊರನಡೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Karishma Kapoor)ಆಗಿದೆ. ಅಲ್ಲಿ ಆಗಿದ್ದೇನು ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.

ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್‌ನ ಪ್ರೋಮೋದಲ್ಲಿ, ಹುಡುಗರಿಬ್ಬರು ಅಶೋಕ ಚಿತ್ರದಲ್ಲಿ ಕರೀನಾ ಕಪೂರ್‌ ನಟಿಸಿದ ರೋಶ್ನಿ ಸೇ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ತೀರ್ಪುಗಾರ ಸೀಟಿನಲ್ಲಿ ಕುಳಿತಿದ್ದ ಕರಿಷ್ಮಾ ಅವರು ನೋಡಿದ್ದಾರೆ. ಹುಡುಗರು ಎತ್ತರದ ವೇದಿಕೆಯ ಮೇಲೆ, ವಾಟರ್ ವರ್ಕ್ಸ್‍ನೊಂದಿಗೆ ನೃತ್ಯ ಮಾಡುತ್ತಿದ್ದಾರೆ. ಇತರ ತೀರ್ಪುಗಾರರು ಪ್ರದರ್ಶನದಿಂದ ಸಿಕ್ಕಾಪಟ್ಟೆ ಖುಷಿಯಾಗಿದ್ದರೂ, ಕರಿಷ್ಮಾ ಅವರನ್ನು ಅಸಮಾಧಾನಗೊಳಿಸಿದೆಯಂತೆ. ಹಾಗಾಗಿ ಅವರು ಅಲ್ಲಿಂದ ಎದ್ದು ಹೊರಗೆ ನಡೆದಿದ್ದಾರೆ. ಆ ವೇಳೆ ಸಾಜಿದ್ ಖಾನ್, ಗೀತಾ ಕಪೂರ್ ಮತ್ತು ಟೆರೆನ್ಸ್ ಲೂಯಿಸ್ ಅವರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದಾಗ, ಕರಿಷ್ಮಾ ಅದನ್ನು ಲೆಕ್ಕಿಸದೆ ಹೊರಗೆ ಹೋಗಿದ್ದಾರೆ. ತಂಗಿ ಕರೀನಾ ಕಪೂರ್‌ ಹಾಡಿಗೆ ಅಸಮಾಧಾನಗೊಂಡು ಹೊರನಡೆದ ಅಕ್ಕ ಕರೀಷ್ಮಾ ಕಪೂರ್‌ ನಡೆ ಭಾರಿ ಚರ್ಚೆಗೆ ಕಾರಣವಾಗಿದೆ.

ಇನ್‍ಸ್ಟಾಗ್ರಾಂನಲ್ಲಿ ವಿಡಿಯೊವನ್ನು ಹಂಚಿಕೊಂಡಿರುವ ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್, “ಐಸಾ ಕ್ಯಾ ಬೋಲ್ ದಿಯಾ ನೆಕ್ಸ್ಟಿಯನ್ ನೆ ಕಿ ಲೋಲೋ ಹೋ ಗಯಿ ಅಪ್‍ಸೆಟ್?” ಎಂದು ಬರೆಯಲಾಗಿದೆ. ನಿಜವಾಗಿಯೂ ಅಲ್ಲಿ ಏನಾಯಿತು ಎಂದು ನೋಡಲು ಅಭಿಮಾನಿಗಳು ಈ ವಾರಾಂತ್ಯದವರೆಗೆ ಕಾತುರದಿಂದ ಕಾಯುತ್ತಿದ್ದರೆ,  ಸೋಶಿಯಲ್ ಮೀಡಿಯಾ  ಬಳಕೆದಾರರು ಇದನ್ನು ತಮಾಷೆಗಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.  

ಇದನ್ನೂ ಓದಿ: ಜಾಮೀನಿನಿಂದ ಹೊರಬಂದು ಐಷಾರಾಮಿ ಜೀವನ ನಡೆಸಿದ ರೌಡಿ ಸುನಿ; ಅಧಿಕಾರಿಗಳಿಂದ ತನಿಖೆ

ತನ್ನ ನಾಲ್ಕನೇ ಸೀಸನ್ ನಲ್ಲಿ, ಇಂಡಿಯಾಸ್ ನೆಕ್ಸ್ಟ್ ಡ್ಯಾನ್ಸರ್ ಜುಲೈ 13 ರಂದು ಪ್ರಥಮ ಪ್ರದರ್ಶನ ಕಂಡಿತು ಮತ್ತು ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ. ಅಲ್ಲದೇ  ಇದು ಸ್ಟ್ರೀಮಿಂಗ್ ಗಾಗಿ ಸೋನಿ ಎಲ್‍ಐವಿಯಲ್ಲಿಯೂ ಲಭ್ಯವಿದೆ. ಪ್ರತಿ ವಾರ ಇದರಲ್ಲಿ ಬಾಲಿವುಡ್ ತಾರೆಯರನ್ನು ಅತಿಥಿಗಳಾಗಿ ಆಹ್ವಾನಿಸಲಾಗುತ್ತದೆ. ಇತ್ತೀಚೆಗೆ, ಸೋನಾಕ್ಷಿ ಸಿನ್ಹಾ ತಮ್ಮ ಪತಿ ಜಹೀರ್ ಇಕ್ಬಾಲ್ ಅವರೊಂದಿಗೆ ಈ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಖಾನ್ ಮತ್ತು ಕಾಜೋಲ್ ಅಭಿನಯದ ದಿಲ್ ವಾಲೆ ಚಿತ್ರದ ಜನಮ್ ಜನಮ್ ಎಂಬ ರೊಮ್ಯಾಂಟಿಕ್ ಹಾಡಿಗೆ ನವ ದಂಪತಿಯಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ನೃತ್ಯ ಮಾಡಿದ್ದಾರೆ. ಇದರಲ್ಲಿ ಅವರ ಕೆಮಿಸ್ಟ್ರಿ ಮತ್ತು ಪರಸ್ಪರ ಪ್ರೀತಿಯನ್ನು ಕಂಡು ತೀರ್ಪುಗಾರರೇ  ಬೆರಗಾಗಿದ್ದಾರೆ.