ನವದೆಹಲಿ: ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ(Baba Siddiqui) ಬಳಿಕ ದೇಶಾದ್ಯಂತ ಭಾರೀ ಸುದ್ದಿಯಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್(Lawrence Bishnoi)ನನ್ನು ಎನ್‌ಕೌಂಟರ್ ಮಾಡುವ ಪೊಲೀಸರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದ ಕರಣಿ ಸೇನೆ ಇದೀಗ ಮತ್ತೆ ಅಂತಹದ್ದೇ ಘೋಷಣೆ ಹೊರಡಿಸಿದೆ. ಈ ಬಾರಿ ಪೊಲೀಸ್ ಮಾತ್ರವಲ್ಲದೇ ಬೇರೆ ಯಾರೇ ಲಾರೆನ್ಸ್ ಬಿಷ್ಣೋಯ್‌ನನ್ನು ಹತ್ಯೆ ಮಾಡಿದರೆ ಅವರಿಗೆ 1,11,11,111 ರೂ. ಬಹುಮಾನ ನೀಡುವುದಾಗಿ ಕರಣಿ ಸೇನಾ(Karni Sena) ಅಧ್ಯಕ್ಷ ಡಾ. ರಾಜ್ ಶೆಖಾವತ್(Dr Raj Shekhawat) ಘೋಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
एक और घोषणा – अतंकवादी लोरेंस के संबंध मे – रिपब्लिक भारत की भ्रामक न्यूज़ का मुँहतोड़ जवाब, साथ ही एक और घोषणा, साबरमती जेल मे बंद कैदी योद्धाओं द्वारा भी यदि आतंकवादी लोरेंस ठोका जाएगा तब भी यही पुरस्कार राशि क्षत्रिय करणी सेना द्वारा प्रदान की जाएगी । @aajtak @ABPNews… pic.twitter.com/N5t6Zqqsdw
— Dr Raj Shekhawat (@IAMRAJSHEKHAWAT) October 27, 2024
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಕರ್ಣಿ ಸೇನೆಯ ರಾಜ್ ಶೆಖಾವತ್ ತಮ್ಮ ಉದ್ದೇಶಗಳನ್ನು ಸಮರ್ಥಿಸಿಕೊಂಡಿದ್ದಾರೆ. ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿನನ್ನು ಕೊಂದ ಯಾವುದೇ ಕೈದಿಗಳಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಹಿಂದಿಯಲ್ಲಿ ಮಾತನಾಡಿದ ರಾಜ್ ಶೇಖಾವತ್, “ನಾನು ಘೋಷಿಸಿದ ₹1,11,11,111 ಬಹುಮಾನವನ್ನು ಲಾರೆನ್ಸ್ ಬಿಷ್ಣೋಯ್ ಅವರನ್ನು ಎನ್‌ಕೌಂಟರ್ ಮಾಡುವ ಪೊಲೀಸರಿಗೆ ನೀಡಲಾಗುವುದು. ಹೆಚ್ಚುವರಿಯಾಗಿ, ಸಬರಮತಿ ಜೈಲಿನಲ್ಲಿರುವ ಯಾವುದೇ ಖೈದಿ ಅಥವಾ ಯೋಧ ಲಾರೆನ್ಸ್ ಬಿಷ್ಣೋಯ್ ಅವರನ್ನು ಕೊಂದರೆ, ಅದೇ ಬಹುಮಾನವನ್ನು ಕ್ಷತ್ರಿಯ ಕರ್ಣಿ ಸೇನೆಯಿಂದ ನೀಡಲಾಗುತ್ತದೆ ಎಂದಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಇಂತಹದ್ದೇ ವಿಡಿಯೋವೊಂದನ್ನು ಶೆಖಾವತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ವೈರಲ್ ಆಗಿದ್ದ ವಿಡಿಯೋದಲ್ಲಿ ಲಾರೆನ್ಸ್ ಬಿಷ್ಣೋಯ್ ದೇಶಕ್ಕೆ ಬಹಳ ಅಪಾಯಕಾರಿ ಎಂದಿರುವ ಶೇಖಾವತ್ ಬಿಜೆಪಿ ಮತ್ತು ಗುಜರಾತ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಇಡೀ ದೇಶಕ್ಕೆ ಅಪಾಯಕಾರಿ ವ್ಯಕ್ತಿ. ಆತನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿ. ಆತನನ್ನು ಹತ್ಯೆಗೈದ ಯಾವುದೇ ಪೊಲೀಸ್ ಅಧಿಕಾರಿಗೆ 1,11,11,111 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು..
ಕರ್ಣಿ ಸೇನೆಯ ಮಾಜಿ ಮುಖ್ಯಸ್ಥ ಬಿಷ್ಣೋಯ್ ಗ್ಯಾಂಗ್‌ನಿಂದ ಹತ್ಯೆ
ಕರ್ಣಿ ಸೇನೆಯ ಮಾಜಿ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಡಿಸೆಂಬರ್ 5, 2023 ರಂದು ಕೆಲವು ಅಪರಿಚಿತ ದಾಳಿಕೋರರು ಗುಂಡಿಕ್ಕಿ ಕೊಂದಿದ್ದರು. ಗುಂಡಿನ ದಾಳಿಯ ನಂತರ, ಶೂಟರ್‌ಗಳು ಸ್ಥಳದಿಂದ ಪರಾರಿಯಾಗಿದ್ದರು. ಗೊಗಮೆಡಿ ಹತ್ಯೆಯ ಕೆಲವು ಗಂಟೆಗಳ ನಂತರ, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅದರ ಹೊಣೆ ಹೊತ್ತುಕೊಂಡಿತ್ತು. ಗೋಗಮೇಡಿ ಹತ್ಯೆ ಪ್ರಕರಣದಲ್ಲಿ ಈ ವರ್ಷ ಜೂನ್ 5 ರಂದು ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಅದರಲ್ಲಿ ರೋಹಿತ್ ಗೋಡಾರಾ ಮಾಸ್ಟರ್ ಮೈಂಡ್ ಎಂದು ಬಣ್ಣಿಸಲಾಗಿತ್ತು. ಇದಲ್ಲದೆ, ಗೋಲ್ಡಿ ಬ್ರಾರ್ ಮತ್ತು ವೀರೇಂದ್ರ ಚರಣ್ ಸೇರಿದಂತೆ ಇತರರು ಕೊಲೆಗೆ ಸಂಚು ರೂಪಿಸಿದ ಆರೋಪ ಹೊತ್ತಿದ್ದಾರೆ. ಇವರೆಲ್ಲರೂ ಬಿಷ್ಣೋಯ್ ಗ್ಯಾಂಗ್ ಜತೆ ನಂಟು ಹೊಂದಿರುವ ಆರೋಪ ಇದೆ.
ಈ ಸುದ್ದಿಯನ್ನೂ ಓದಿ: Salman Khan: ಬಿಷ್ಣೋಯ್ ಗ್ಯಾಂಗ್‌ನ ಭಯಕ್ಕೆ ಸಲ್ಮಾನ್ ನಿದ್ದೆಯೇ ಮಾಡುತ್ತಿಲ್ಲ; ಜಿಶಾನ್ ಸಿದ್ದಕಿ