Wednesday, 11th December 2024

‘ಕಾಶಿ- ತಮಿಳು ಸಂಗಮಮ್’ ಕಾರ್ಯಕ್ರಮ ಉದ್ಘಾಟನೆ

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಕಾಶಿ- ತಮಿಳು ಸಂಗಮಮ್’ಎಂಬ ತಿಂಗಳ ಅವಧಿಯ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಡಿಸೆಂಬರ್ 16ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ದೇಶದ ಎರಡು ಐತಿಹಾಸಿಕ ಪ್ರದೇಶಗಳಾದ ತಮಿಳುನಾಡು ಮತ್ತು ಕಾಶಿ ನಡುವಿನ ಹಳೆಯ ಕೊಂಡಿಗಳನ್ನು ಮರು ಶೋಧಿಸಿ ಬೆಸೆಸುವ ಮತ್ತು ಎರಡರ ಸಾಂಪ್ರದಾಯಿಕ ಸಂಸ್ಕೃತಿ ತಿಳಿಯುವ ಉದ್ದೇಶ ಹೊಂದಿದೆ.

ಬನಾರಸ್‌ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಮೈದಾನದಲ್ಲಿ ಪ್ರಧಾನಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಇದು ಕೇಂದ್ರ ಸರ್ಕಾರದ ‘ಆಜಾದಿ ಕ ಅಮೃತ್‌ ಮಹೋತ್ಸವ್‌’ ಕಾರ್ಯಕ್ರಮದ ಭಾಗವಾಗಿದೆ.

ಕೇಂದ್ರ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರು ವಾರಾಣಸಿಗೆ ಭೇಟಿ ನೀಡಿ ಪೂರ್ವಭಾವಿ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.

ಸಂಸ್ಕೃತಿ, ಜವಳಿ, ರೈಲ್ವೆ, ಪ್ರವಾಸೋದ್ಯಮ, ಆಹಾರ ಸಂಸ್ಕರಣೆ, ಮಾಹಿತಿ ಮತ್ತು ಪ್ರಸಾರ ಇಲಾಖೆ ಮತ್ತು ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಕೇಂದ್ರದ ಶಿಕ್ಷಣ ಸಚಿವಾಲಯವು ಕಾಶಿ-ತಮಿಳು ಸಂಗಮಮ್ ಅನ್ನು ಆಯೋಜಿಸಿದೆ.

ತಮಿಳುನಾಡಿನ 2500 ಕ್ಕೂ ಹೆಚ್ಚಿನ ಮಂದಿ ವಾರಣಾಸಿಗೆ 8 ದಿನಗಳ ಈ ಪ್ರವಾಸದಲ್ಲಿ ಭೇಟಿ ನೀಡಲಿದ್ದಾರೆ.