Thursday, 12th December 2024

ಲೋಕಸಭಾ ಚುನಾವಣೆ: ಪಕ್ಷದ ಹೆಸರು ಬದಲಾಯಿಸಿದ ಕೆಆರ್‌ಎಸ್‌

ವದೆಹಲಿ: ಲೋಕಸಭಾ ಚುನಾವಣೆ(2024) ಮೇಲೆ ಕಣ್ಣಿಟ್ಟು, ಕೆ.ಚಂದ್ರಶೇಖರ್ ರಾವ್ ಅವರು ಬುಧವಾರ ತಮ್ಮ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಹೆಸರನ್ನು “ಭಾರತ್ ರಾಷ್ಟ್ರ ಸಮಿತಿ” (ಬಿಆರ್‌ಎಸ್) ಎಂದು ಬದಲಾಯಿಸಿದ್ದಾರೆ.

ಹೈದರಾಬಾದಿನಲ್ಲಿ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸ ಲಾಗಿದೆ. ಟಿಆರ್‌ಎಸ್ ಹೆಸರನ್ನು ಬಿಆರ್‌ಎಸ್ ಎಂದು ಬದಲಾಯಿಸಲು ಪಕ್ಷದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿದೆ ಎಂದು ಘೋಷಿಸಿದರು.

ಪಕ್ಷದ ನಾಯಕತ್ವವು ಈಗ ರಾಷ್ಟ್ರೀಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸಮರ್ಥವಾಗಿ ಎದುರಿಸಲು ತನ್ನ “ತೆಲಂಗಾಣ ಉತ್ತಮ ಆಡಳಿತ ಮಾದರಿ” ಯನ್ನು ಪಿಚ್ ಮಾಡುವ ಮೂಲಕ ಜನರನ್ನು ತಲುಪಲು ಯೋಜಿಸಿದೆ.

ಕಳೆದ ಏಪ್ರಿಲ್ನಲ್ಲಿ ತನ್ನ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ, ಬಿಜೆಪಿಯು ತನ್ನ ರಾಜಕೀಯ ಅನುಕೂಲಕ್ಕಾಗಿ “ಕೋಮು ಭಾವನೆಗಳನ್ನು” ಬಳಸಿಕೊಳ್ಳುತ್ತಿರುವ ಕಾರಣ ದೇಶದ ಹಿತದೃಷ್ಟಿಯಿಂದ ರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಪಕ್ಷವು ನಿರ್ಧರಿಸಿತ್ತು.