Sunday, 8th September 2024

ಜನರು ತಮ್ಮ ಅಂಗಡಿಗಳಲ್ಲಿ ಪಿಸ್ತೂಲ್ ಇಟ್ಟುಕೊಳ್ಳಬೇಕು: ಶಾಸಕ ವಿಕ್ರಮ್​ ಸೈನಿ

ಲಖನೌ: ಉತ್ತರ ಪ್ರದೇಶದ ಮುಜಾಫರ್​ ನಗರದ ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್​ ಸೈನಿ ಅವರು ನಗರದ ವ್ಯಾಪಾರಿಗಳಿಗೆ ಸುರಕ್ಷತಾ ಸಲಹೆಗಳನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ವಿವಾದ ಸೃಷ್ಟಿಸಿದೆ.

ಅಂಗಡಿಯವರು ಮತ್ತು ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿ, ಜನರು ತಮ್ಮ ಅಂಗಡಿ ಗಳಲ್ಲಿ ಕಲ್ಲು, ಸಲಿಕೆ ಮತ್ತು ಪಿಸ್ತೂಲ್​ಗಳನ್ನು ಇಟ್ಟುಕೊಳ್ಳಬೇಕು ಎಂದು ಶಾಸಕ ಸೈನಿ ಹೇಳುತ್ತಿರುವುದು ವಿಡಿಯೊದಲ್ಲಿದೆ.

ಪೊಲೀಸರು ಎಷ್ಟು ದಿನ ಈ ಭದ್ರತಾ ಕೆಲಸ ಮಾಡುತ್ತಾರೆ ? ಪೊಲೀಸರು ಬರುವಷ್ಟರಲ್ಲಿ ನಿಮ್ಮ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿರುತ್ತದೆ ಎಂದು ವ್ಯಾಪಾರಿಗಳನ್ನು ಎಚ್ಚರಿಸು ತ್ತಾರೆ.

ಕಳೆದ ಶನಿವಾರ ಜನಸತ್​ ತಹಸಿಲ್​ ಪ್ರದೇಶದ ವಾಜಿದ್​ಪುರ ಕವಾಲಿ ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ವಿಡಿಯೊವನ್ನು ಚಿತ್ರೀಕರಿಸ ಲಾಗಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಗೆಲುವು ಸಾಧಿಸಿದ್ದಕ್ಕಾಗಿ ಕೇಂದ್ರ ರಾಜ್ಯ ಸಚಿವ ಸಂಜೀವ್​ ಬಲ್ಯಾನ್​ ಮತ್ತು ಬಿಜೆಪಿ ಶಾಸಕ ವಿಕ್ರಮ್​ ಸೈನಿ ಅವರನ್ನು ಸನ್ಮಾನಿಸಲು ಈ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು.

ಸಮಾರಂಭದಲ್ಲಿ ಶಾಸಕ ಸೈನಿ ಭಾಷಣ ಮಾಡಿದ್ದು, ಅದನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಮಾಡಿದ್ದಾರೆ.

error: Content is protected !!