Monday, 16th December 2024

Keerthy Suresh: ವೈಟ್ ಗೌನ್ ಧರಿಸಿ ಪತಿ ಜತೆ ಲಿಪ್ ಲಾಕ್ ಮಾಡಿದ ಕೀರ್ತಿ ಸುರೇಶ್! ಫೋಟೋ ವೈರಲ್

keerthy suresh

ನವದೆಹಲಿ: ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿಕೊಂಡವರು ನಟಿ ಕೀರ್ತಿ ಸುರೇಶ್. ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಫ್ಯಾನ್ ಫಾಲೋವರ್ಸ್‌ ಹೊಂದಿರುವ ನಟಿ ಜೊತೆಗೆ ತನ್ನ ಬ್ಯೂಟಿ, ನಟನೆ ಮೂಲಕವೇ ಹೆಚ್ಚು ಕ್ರೇಜ್ ಹುಟ್ಟಿಸಿದವರು. ಕೀರ್ತಿ ಸುರೇಶ್(Keerthy Suresh) ಮೊನ್ನೆಯಷ್ಟೇ ಖ್ಯಾತ ಉದ್ಯಮಿ ಆಂಟೋನಿ ಜೊತೆ ಹಿಂದೂ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಿದ್ದರು. ಇದೀಗ ಸೌತ್ ಬ್ಯೂಟಿ ಕೀರ್ತಿ ಸುರೇಶ್ ದಂಪತಿ ಕ್ರಿಶ್ಚಿಯನ್‌ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, ತಮ್ಮ ಮದುವೆ ಪಾರ್ಟಿಯಲ್ಲಿ ಈ ಜೋಡಿ ಲಿಪ್ ಕಿಸ್ ಮಾಡಿದ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಎರಡು ಕುಟುಂಬದ ಸಂಪ್ರದಾಯದಂತೆ ಮದುವೆ

ಡಿಸೆಂಬರ್ 12 ರಂದು, ಕೀರ್ತಿ ಮತ್ತು ಆಂಟನಿ ಗೋವಾದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ದಕ್ಷಿಣ ಭಾರತೀಯ ಶೈಲಿಯಲ್ಲಿ ವಿವಾಹವಾದರು. ಕೀರ್ತಿ ಸುರೇಶ್ ಅವರ ಕುಟುಂಬದ ಸಂಪ್ರದಾಯದಂತೆ ಬ್ರಾಹ್ಮಣ ಶೈಲಿಯಲ್ಲಿ ಮದುವೆಯಾದರು. ಅಯ್ಯಂಗಾರ್‌ ಬ್ರಾಹ್ಮಣ ಸಂಪ್ರದಾಯದಲ್ಲಿ ವಿವಾಹವಾದ ನಂತರ ಆಂಟನಿ ಕುಟುಂಬದ ಕ್ರಿಶ್ಚಿಯನ್ ಸಂಪ್ರದಾಯದ ಮೂಲಕ ಮತ್ತೊಮ್ಮೆ ವಿವಾಹ ನೆರೆವೇರಿದೆ.

ಲಿಪ್ ಕಿಸ್ ಪೋಟೋ ಶೇರ್ ಮಾಡಿ‌ ವಿಭಿನ್ನ ಟೈಟಲ್ ಕೊಟ್ಟ ಕೀರ್ತಿ

ಕೀರ್ತಿ ಸುರೇಶ್ ಅವರು ಗೋವಾದ ಸೇಂಟ್ ರೆಜಿಸ್ ರೆಸಾರ್ಟ್‌ನಲ್ಲಿ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದು, ತನ್ನ ಮದುವೆಯ‌ ಸುಂದರ ಕ್ಷಣದ ರೋಮ್ಯಾಂಟಿಕ್ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಪತಿ ಜೊತೆ ಲಿಪ್ ಲಾಕ್ ಮಾಡಿದ ಫೋಟೋವನ್ನು ಕೂಡ ತನ್ನ ಇನ್ಷ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ‌ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪಾರ್ಟಿ ಫೋಟೋ ಹಂಚಿಕೊಂಡ ನಟಿ ‘ನೈಕ್ ಪ್ರೀತಿಗಾಗಿ’ ಎಂದು ವಿಭಿನ್ನ ಟೈಟಲ್ ಕೂಡ ಕೊಟ್ಟಿದ್ದಾರೆ.

ವೈಟ್ ಡ್ರೆಸ್ ನಲ್ಲಿ ರಾಜಕುಮಾರಿಯಂತೆ ಮಿಂಚಿದ ನಟಿ

ನಟಿ‌ ಕೀರ್ತಿ ಸುರೇಶ್ ಅವರು ಲಾಂಗ್ ವೈಟ್ ಗೌನ್ ನಲ್ಲಿ ಮಿಂಚಿದ್ದು ಥೆಟ್ ರಾಜಕುಮಾರಿಯಂತೆ ಕಾಣಿಸಿಕೊಂಡಿದ್ದಾರೆ. ಬ್ಯೂಟಿ ಕ್ವೀನ್ ಕೀರ್ತಿ ಹೆಚ್ಚಾಗಿ ಟ್ರೆಡಿಶನಲ್ ಲುಕ್​ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ನಟಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಬ್ಯೂಟಿಫುಲ್ ಡಿಸೈನ್ ನೊಂದಿಗೆ ಫುಲ್ ನೆಕ್ ಇರೋ ವೈಟ್ ಗೌನ್ ನಲ್ಲಿ ರಾಜಕುಮಾರಿಯಂತೆ ಕಂಗೊಳಿಸಿದ್ದಾರೆ.

ಕೀರ್ತಿ ಪೋಟೋ ನೋಡಿದ ಅಭಿಮಾನಿಗಳು ಕಳೆದುಹೋಗಿದ್ದು ಅಭಿಮಾನಿಗಳಂತೂ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನಿಮ್ಮಿಬ್ಬರ ಮೇಲೆ ಯಾವುದೇ ದೃಷ್ಟಿ ಬೀಳದಿರಲಿ ಎಂದು ಈ ಫೋಟೋಗೆ ಕಾಮೆಂಟ್‌ ಮಾಡಿದ್ದಾರೆ. ಹಾಗೆಯೇ ಆಕೆಯ ಪತಿ ಆಂಟೋನಿ ವೈಟ್ ಶೂಟ್ ಹಾಗೂ ಟೈನೊಂದಿಗೆ ಬಿಳಿ ಪ್ಯಾಂಟ್ ಮತ್ತು ಸೂಟ್‌ನಲ್ಲಿ ಕಾಣಿಸಿಕೊಂಡಿದ್ದು ಪರ್ಫೆಕ್ಟ್‌ ಜೋಡಿ, ಮೆಡ್ ಫಾರ್ ಇಚ್ ಆದರ್ ಎಂದು ‌ಅಭಿಮಾನಿಗಳು ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ.

ಈ ಪಾರ್ಟಿಯು ಫ್ಯಾಮಿಲಿ ಮತ್ತು ಆಪ್ತ ಸ್ನೇಹಿತರ ಜೊತೆ ನಡೆದಿದ್ದು ಕ್ಯೂಟ್ ದಂಪತಿ ಸೇರಿ‌ ಡ್ಯಾನ್ಸ್‌ ಮಾಡಿ ಮದುವೆ ಸಂಭ್ರಮದ ಖುಷಿ ಹೆಚ್ಚಿಸಿದ್ದಾರೆ. ಇದರ ಫೋಟೋಗಳು ಕೂಡ ವೈರಲ್‌ ಆಗಿವೆ. ಇದಕ್ಕೆ ಅಭಿಮಾನಿಯೊಬ್ಬರು ವಾವ್…! ನೀವು ತುಂಬಾ ಸುಂದರವಾಗಿದ್ದೀರಿ. ಇಲ್ಲಿ ಪ್ರೀತಿ, ನಗು ಮತ್ತು ಮುಂದಿನ ಅತ್ಯಂತ ಸುಂದರವಾದ ಪ್ರಯಾಣ ಎಂದಿದ್ದಾರೆ. ಹೀಗೆ ನಾನಾ ಬಗೆಯ ಕಾಮೆಂಟ್ ಗಳ ಜೊತೆಗೆ ಅವರ ಫ್ಯಾನ್ಸ್ ಶುಭಾಶಯ ತಿಳಿಸಿದ್ದಾರೆ. ಇನ್ನು ಮಹಾನಟಿ ಚಿತ್ರದ ಮೂಲಕ ತೆಲುಗಿನಲ್ಲಿ ಖ್ಯಾತಿ ಗಳಿಸಿದ್ದ ನಟಿಗೆ ಅಭಿನಯಕ್ಕಾಗಿ ಕೀರ್ತಿ ಗೆ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಯೂ ಸಿಕ್ಕಿದ್ದು ಮುಂದಿನ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತರದಲ್ಲಿ ಕಾಯುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Keerthy Suresh: ಹಸೆಮಣೆಗೇರಲು ಕೀರ್ತಿ ಸುರೇಶ್‌ ಸಜ್ಜು; ವರನ್ಯಾರು? ಮದುವೆ ಯಾವಾಗ?