ವಿಶ್ವವಿದ್ಯಾಲಯಗಳ ಉಪಕುಲಪತಿಗಳ ನೇಮಕದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಸು ತ್ತಿದ್ದಾರೆ ಎಂಬ ಸಿಎಂ ಆರೋಪವನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಿರಸ್ಕರಿಸಿದ್ದಾರೆ.
ಆರ್‌ಎಸ್‌ಎಸ್ ಜನರನ್ನು ಕರೆತರಲು ನಾನು ಹೀಗೆ ಮಾಡುತ್ತಿದ್ದೇನೆ ಎಂದು ಅವರು ಪದೇ ಪದೇ ಹೇಳುತ್ತಿದ್ದಾರೆ. ನನ್ನ ಅಧಿಕಾರ ಬಳಸಿಕೊಂಡು ನಾನು ಆರ್‌ಎಸ್‌ಎಸ್‌ನವರಲ್ಲ, ಯಾವುದೇ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಿದ್ದರೆ, ನಾನು ರಾಜೀನಾಮೆ ನೀಡು ತ್ತೇನೆ. ಅದನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಅವರು (ಸಿಎಂ ವಿಜಯನ್) ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ?” ಎಂದು ರಾಜ್ಯಪಾಲರು ಸವಾಲು ಹಾಕಿದ್ದಾರೆ ಎಂದು ವರದಿ ಮಾಡಿವೆ.
ಚಿನ್ನದ ಕಳ್ಳಸಾಗಣೆ ಹಗರಣದ ಬಗ್ಗೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಪಾಲರು, ನಾನು ಕಳ್ಳಸಾಗಣೆ ಚಟುವಟಿಕೆಗಳನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಪ್ರೋತ್ಸಾಹಿಸುತ್ತಿರುವುದನ್ನು ನೋಡಿದ್ದೇನೆ. ನಾನು ಮಧ್ಯಪ್ರವೇಶಿಸಲು ಕಾರಣಗಳಿವೆ.
ಒಂದು ತಿಂಗಳಿನಿಂದ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಪ್ರತಿ ಕಡತವನ್ನೂ ಹಿಂತಿರುಗಿಸಿದ್ದೇನೆ. ಎಲ್ಲರಿಗೂ ಲಕ್ಷ್ಮಣ ರೇಖೆ ಇದೆ, ರಾಜ್ಯಪಾಲರ ಕರೆಗೆ ಸ್ಪಂದಿಸದ ಸಿಎಂ ಲಕ್ಷ್ಮಣ ರೇಖೆ ದಾಟುತ್ತಿದ್ದಾರೆ. ಸಿಎಂ ಕಚೇರಿಯಲ್ಲಿ ಜನ ಪರದಾಡುತ್ತಿದ್ದಾರೆ” ಎಂದು ರಾಜ್ಯಪಾಲ ಹೇಳಿದ್ದಾರೆ.