Sunday, 15th December 2024

ಕರೋನಾ ಹಾವಳಿ ಹೆಚ್ಚಿದ್ದರೂ, ಲಾ‌ಕ್ಡೌನ್ ತೆಗೆಯಲು ಕೇರಳ ಸರ್ಕಾರ ನಿರ್ಧಾರ

ತಿರುವನಂತಪುರಂ: ಕೇರಳದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಆದೆರ ಈ ಎಲ್ಲದರ ನಡುವೆ, ಕೇರಳ ಸರ್ಕಾರ ಬುಧವಾರ ವಾರಾಂತ್ಯದ ಲಾಕ್‌ಡೌನ್ ತೆಗೆದು ಹಾಕಲು ನಿರ್ಧರಿಸಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ಮ್ಯಾನೇಜ್‌ಮೆಂಟ್ ಪ್ಯಾನೆಲ್‌ನ ತಜ್ಞರು ನೀಡಿದ ವರದಿಯನ್ನು ಚರ್ಚಿಸಿದ ನಂತರ, ಸಭೆಯಲ್ಲಿ ಹಾಜರಿದ್ದ ಸದಸ್ಯರು ಕೆಲವು ನಿರ್ಬಂಧಗಳೊಂದಿಗೆ ರಾತ್ರಿ 9 ರವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವಂತೆ ಶಿಫಾರಸು ಮಾಡಿದ್ದರು.

ಕೇರಳದಲ್ಲಿ ಅಂಗಡಿಗಳು ವಾರದ 6 ದಿನಗಳು ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತವೆ. ಒಂದು ವಾರದಲ್ಲಿ 1000 ಜನಸಂಖ್ಯೆಯಲ್ಲಿ 10 ಕ್ಕಿಂತ ಹೆಚ್ಚು ಜನರು ಸೋಂಕಿಗೆ ಒಳಗಾದರೆ ತ್ರಿವಳಿ ಲಾಕ್‌ಡೌನ್ ಜಾರಿಯಾಗಲಿದೆ. ಓಣಂ ಮತ್ತು ಸ್ವಾತಂತ್ರ್ಯ ದಿನಾಚರಣೆಯ ದೃಷ್ಟಿಯಿಂದ, ಆ.15 ಮತ್ತು ಆ.22 ರಂದು ಲಾಕ್‌ಡೌನ್ ಇರುವುದಿಲ್ಲ. ವಿವಾಹ ಸಮಾರಂಭ ಅಥವಾ ಅಂತ್ಯಕ್ರಿಯೆಗೆ ಕೇವಲ 20 ಜನರಿಗೆ ಮಾತ್ರ ಅವಕಾಶವಿದೆ.