ತಿರುವನಂತಪುರ: ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಜನರನ್ನು ಸೆಳೆಯುತ್ತಿರುವ ಆನ್ಲೈನ್ ರಮ್ಮಿ ಗೇಮ್ಗೆ ಸಂಬಂಧಿಸಿದ ಪ್ರಕರಣದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಟಿ ತಮನ್ನಾ ಭಾಟಿಯಾ ಹಾಗೂ ನಟ ಅಜು ವರ್ಗೀಸ್ ಅವರಿಗೆ ಕೇರಳ ಹೈಕೋರ್ಟ್ ನೋಟಿಸ್ ನೀಡಿದೆ.
ಇವರು ಆನ್ಲೈನ್ ರಮ್ಮಿ ಗೇಮ್ ಪ್ರಚಾರ ರಾಯಭಾರಿಗಳಾಗಿದ್ದಾರೆ. ಆನ್ಲೈನ್ ರಮ್ಮಿ ಗೇಮ್ಗೆ ನಿಷೇಧ ಹೇರಬೇಕು ಎಂಬ ಮನವಿಯೊಂದಕ್ಕೆ ಸಂಬಂಧಿಸಿ ಈ ನೋಟಿಸ್ ನೀಡಲಾಗಿದೆ. ಈ ವಿಚಾರದ ಕುರಿತು ನಿಲುವು ತಿಳಿಸುವಂತೆ ಸರ್ಕಾರಕ್ಕೂ ಹೈಕೋರ್ಟ್ ಸೂಚಿಸಿದೆ.
ಮುಗ್ದ ಯುವಕರ ಪ್ರಾಣಕ್ಕೆ ಎರವಾಗುತ್ತಿದ್ದು, ಅಂಥವುಗಳನ್ನು ಪ್ರಚೋದಿಸುವ ವಿರಾಟ್ ಕೊಹ್ಲಿ ಮತ್ತು ತಮನ್ನಾ ಭಾಟಿಯಾ ಅವರನ್ನು ಬಂಧಿಸಬೇಕು ಎಂದು ಮನವಿ ಮಾಡಿ ವಕೀಲ ಎ.ಪಿ.ಸೂರ್ಯಪ್ರಕಾಶಂ ಆಗಸ್ಟ್ನಲ್ಲಿ ಮದ್ರಾಸ್ ಹೈಕೋರ್ಟ್ಗೂ ಅರ್ಜಿ ಸಲ್ಲಿಸಿದ್ದರು.