ಆರೋಗ್ಯ ವಲಯದ ಎಲ್ಲ ಉದ್ಯೋಗಿಗಳ ರಕ್ಷಣೆಗಾಗಿ ‘ಆಸ್ಪತ್ರೆ ಸಂರಕ್ಷಣಾ ಕಾಯ್ದೆ’ಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಲು ನಿರ್ಧರಿಸಿದೆ. ನೌಕರರಿಗೆ ರಕ್ಷಣೆ, 6 ತಿಂಗಳಿಂದ 7 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ನಿಬಂಧನೆಗಳು ತಿದ್ದುಪಡಿಯಲ್ಲಿ ಸೇರಿವೆ.
ಈ ಕಾಯಿದೆಯು ಆರೋಗ್ಯ ವಲಯದ ನೌಕರರು ಸೇರಿದಂತೆ ಎಲ್ಲ ಉದ್ಯೋಗಿಗಳಿಗೆ ಸುರಕ್ಷತೆ ನೀಡುತ್ತದೆ.
ಆಸ್ಪತ್ರೆಗಳಲ್ಲಿನ ಹಿಂಸಾಚಾರಕ್ಕೆ ಆರು ತಿಂಗಳಿಂದ ಏಳು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಬಹುದು. ಅಪರಾಧದ ತೀವ್ರತೆಗೆ ಅನುಗುಣ ವಾಗಿ ಶಿಕ್ಷೆ ಹೆಚ್ಚಾಗುತ್ತದೆ. ಭಾರತೀಯ ದಂಡ ಸಂಹಿತೆ ಕೊಲೆ ಮತ್ತು ಕೊಲೆ ಯತ್ನಕ್ಕೆ ಗರಿಷ್ಠ ಶಿಕ್ಷೆಯನ್ನು ವಿಧಿಸುತ್ತದೆ. ಆರೋಗ್ಯ ಕಾರ್ಯಕರ್ತರ ಮೌಖಿಕ ನಿಂದನೆ ಕೂಡ ಈ ಕಾಯಿದೆ ಪ್ರಕಾರ ಶಿಕ್ಷಾರ್ಹವಾಗಿದೆ.
ವೈದ್ಯರು, ದಾದಿಯರು, ವೈದ್ಯಕೀಯ ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಲ್ಲದೆ ಭದ್ರತಾ ಸಿಬ್ಬಂದಿ ಕೂಡ ಹೊಸ ಕಾನೂನಿನ ವ್ಯಾಪ್ತಿಗೆ ಬರುತ್ತಾರೆ. ಹೊಸ ಕಾನೂನು ಆಸ್ಪತ್ರೆ ಕಟ್ಟಡಗಳು ಮತ್ತು ಉಪಕರಣಗಳಿಗೆ ಉಂಟಾದ ಹಾನಿಗೆ ಪರಿಹಾರವನ್ನು ಸಂಗ್ರಹಿಸಲು ಒಂದು ವಿಭಾಗವನ್ನು ಒಳಗೊಳ್ಳಲಿದೆ.
ಕಾನೂನು ಇಲಾಖೆ ಆಸ್ಪತ್ರೆ ಸಂರಕ್ಷಣಾ ಕಾಯಿದೆಯ ರಚನೆಯನ್ನು ಪರಿಗಣಿಸುತ್ತಿದೆ. ಈ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲು ನಿರ್ಧರಿಸಲಾಗಿದೆ.
ವಂದನಾ ದಾಸ್ ಹತ್ಯೆಯ ನಂತರ, ಮುಷ್ಕರ ನಡೆಸಿದ ವೈದ್ಯರಿಗೆ ಸರ್ಕಾರ ತ್ವರಿತ ಕಾನೂನು ಜಾರಿ ಭರವಸೆ ನೀಡಿತ್ತು. ಬಳಿಕ ವೈದ್ಯರು ಮುಷ್ಕರ ಹಿಂಪಡೆದಿದ್ದರು. ಹೊಸ ಕಾನೂನಿಗೆ ವಂದನಾ ದಾಸ್ ಹೆಸರಿಡುವ ಬೇಡಿಕೆಯನ್ನೂ ಸರ್ಕಾರ ಪರಿಗಣಿಸು ತ್ತಿದೆ.