Sunday, 15th December 2024

ವಿಧಾನಸಭೆಯ ಮುಖ್ಯದ್ವಾರದ ಮೇಲೆ ಖಾಲಿಸ್ತಾನ ಧ್ಜಜ: ತನಿಖೆಗೆ ಆದೇಶ

ಧರ್ಮಶಾಲಾ: ಡೆಹ್ರಾಡೂನ್‌ನಲ್ಲಿರುವ ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ದ್ವಾರದ ಮೇಲೆ ಭಾನುವಾರ ಖಾಲಿಸ್ತಾನದ ಧ್ಜಜ ಅಂಟಿಸಲಾಗಿದೆ.

ಘಟನೆ ಖಂಡಿಸಿರುವ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಈ ಬಗ್ಗೆ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ತಡರಾತ್ರಿ ಅಥವಾ ಮುಂಜಾನೆ ಕೃತ್ಯ ನಡೆದಿರುವ ಸಾಧ್ಯತೆಗಳಿವೆ.

ಖಾಲಿಸ್ತಾನ ಧ್ವಜಗಳನ್ನು ತೆಗೆದಿದ್ದೇವೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿ ದ್ದೇವೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಖುಶಾಲ್ ಶರ್ಮಾ ಹೇಳಿದ್ದಾರೆ.

‘ಖಾಲಿಸ್ತಾನ್ ಧ್ವಜವನ್ನು ಹಾರಿಸಿದ ಹೇಡಿತನದ ಘಟನೆಯನ್ನು ಖಂಡಿಸುತ್ತೇನೆ’ ಎಂದು ಸಿಎಂ ಠಾಕೂರ್‌ ಟ್ವೀಟ್‌ ಮಾಡಿದ್ದಾರೆ.