Thursday, 12th December 2024

ಖಲಿಸ್ತಾನಿ ಪರ ಬೋಧಕ ಅಮೃತ್‌ಪಾಲ್‌ ಸಿಂಗ್ ಮುನ್ನಡೆ

ಪಂಜಾಬ್‌: ಜೈಲಿನಿಂದಲೇ ಕಣಕ್ಕಿಳಿದಿರುವ ಖಲಿಸ್ತಾನಿ ಪರ ಬೋಧಕ ಅಮೃತ್‌ಪಾಲ್‌ ಸಿಂಗ್ ಮುನ್ನಡೆ ಸಾಧಿಸಿದ್ದು, 59,421 ಮತಗಳ ಅಂತರ ಕಾಯ್ದುಕೊಂಡಿದ್ದಾನೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್‌ನ ಖದೂರ್ ಸಾಹಿಬ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅಮೃತ್‌ ಪಾಲ್‌ ಸಿಂಗ್‌ ಆರಂಭಿಕ ಹಂತದಲ್ಲೇ ಮುನ್ನಡೆ ಸಿಕ್ಕಿದೆ. ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಕುಲ್ಬೀರ್‌ ಸಿಂಗ್‌ ಜೀರಾ 32598 ಮತಗಳನ್ನು ಪಡೆದಿದ್ದಾರೆ.