Thursday, 12th December 2024

ಮುಂಬರುವ ಆಗಸ್ಟ್ 15ರೊಳಗೆ 1000 ಖೇಲೋ ಇಂಡಿಯಾ ಕೇಂದ್ರ ಸ್ಥಾಪನೆ

ವದೆಹಲಿ: ಮುಂದಿನ ವರ್ಷ ಆಗಸ್ಟ್ 15 ರೊಳಗೆ ದೇಶಾದ್ಯಂತ 1000 ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದರು.

‘ಆಗಸ್ಟ್ 15, 2023 ರೊಳಗೆ ದೇಶಾದ್ಯಂತ 1000 ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲಾಗುವುದು. ತರಬೇತುದಾರರ ನೇಮಕಾತಿಗೆ ಸಂಬಂಧಿಸಿದಂತೆ, ಕ್ರೀಡಾ ಸಚಿವರು ಈ ವರ್ಷ 21 ಕ್ರೀಡೆಗಳಿಗೆ 398 ತರಬೇತುದಾರರನ್ನು ನೇಮಿಸಲಾಗಿದೆ ಎಂದು ಘೋಷಿಸಿದರು.