ನವದೆಹಲಿ: ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಕ್ರೀಡೆಗಳನ್ನು ಪರಿಚಯಿ ಸಲು, ಜಮ್ಮು- ಕಾಶ್ಮೀರವನ್ನು ಕ್ರೀಡಾ ಕೇಂದ್ರ ವನ್ನಾಗಿ ಮಾಡಲು ಖೇಲೋ ಇಂಡಿಯಾ ಗೇಮ್ಸ್ ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶುಕ್ರವಾರ ಗುಲ್ಮಾರ್ಗ್ನಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಉದ್ಘಾಟಿಸಿ ದರು. ಬಳಿಕ ಮಾತನಾಡಿ, ಕ್ರೀಡೆಗಳಲ್ಲಿ ನಾವು ತಂಡದ ಉತ್ಸಾಹ ಕಾಣುತ್ತೇವೆ, ಸೋಲಿ ನಿಂದ ಕಲಿಯುತ್ತೇವೆ. ಮತ್ತೆ ವಿಜಯಶಾಲಿಗಳಾಗಲು ಪ್ರಯತ್ನಿಸುತ್ತೇವೆ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.
ಇಂದಿನಿಂದ ಮಾರ್ಚ್ 2ರ ವರೆಗೆ ನಡೆಯಲಿರುವ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ 27 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳಲ್ಲಿದ್ದಾರೆ.