Sunday, 15th December 2024

ಖೇಲೋ ಇಂಡಿಯಾ ವಿಂಟರ್​ ಗೇಮ್ಸ್ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಕ್ರೀಡೆಗಳನ್ನು ಪರಿಚಯಿ ಸಲು, ಜಮ್ಮು- ಕಾಶ್ಮೀರವನ್ನು ಕ್ರೀಡಾ ಕೇಂದ್ರ ವನ್ನಾಗಿ ಮಾಡಲು ಖೇಲೋ ಇಂಡಿಯಾ ಗೇಮ್ಸ್ ಸಹಾಯ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶುಕ್ರವಾರ ಗುಲ್ಮಾರ್ಗ್​ನಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿಂಟರ್​ ಗೇಮ್ಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಉದ್ಘಾಟಿಸಿ ದರು. ಬಳಿಕ ಮಾತನಾಡಿ, ಕ್ರೀಡೆಗಳಲ್ಲಿ ನಾವು ತಂಡದ ಉತ್ಸಾಹ ಕಾಣುತ್ತೇವೆ, ಸೋಲಿ ನಿಂದ ಕಲಿಯುತ್ತೇವೆ. ಮತ್ತೆ ವಿಜಯಶಾಲಿಗಳಾಗಲು ಪ್ರಯತ್ನಿಸುತ್ತೇವೆ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದರು.

ಇಂದಿನಿಂದ ಮಾರ್ಚ್​ 2ರ ವರೆಗೆ ನಡೆಯಲಿರುವ ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟದಲ್ಲಿ 27 ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳಲ್ಲಿದ್ದಾರೆ.