Sunday, 15th December 2024

‘ಕೈ’ ಬಿಟ್ಟು ಕಮಲ ಮುಡಿದ ನಟಿ ಖುಸ್ಬೂ

ಚೆನ್ನೈ: ನಟಿ ಹಾಗೂ ತಮಿಳುನಾಡಿನ ಕಾಂಗ್ರೆಸ್ ನಾಯಕಿಯಾಗಿದ್ದ ಖುಸ್ಬೂ ಸುಂದರ್ ಅವರು ಕಾಂಗ್ರೆಸ್ ಗೆ ರಾಜೀನಾಮೆ ನೀಡಿ. ಬಿಜೆಪಿ ಸೇರಿದ್ದಾರೆ.

ದೆಹಲಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರು ರಾಷ್ಟ್ರೀಯ ಮುಖಂಡರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು. ದೇಶ ಉತ್ತಮ ಮಾರ್ಗದತ್ತ ನಡೆಯಬೇಕಾದರೆ ಪ್ರಧಾನಿ ಮೋದಿ ಅಂತವರ ನಾಯಕತ್ವ ಬೇಕು ಎಂದು ಖುಸ್ಬೂ ಹೇಳಿದ್ದಾರೆ.

ಸೋನಿಯಾ ಗಾಂಧಿ ಗೆ ರಾಜೀನಾಮೆ ಪತ್ರ ರವಾನಿಸಿದ್ದ ಅವರು ನಾನು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದಿದ್ದರು. 2014 ರಿಂದ ಅವರು ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿ ದ್ದರು. ಅದಕ್ಕೂ ಮೊದಲು ಖುಸ್ಬೂ ಡಿಎಂಕೆಯಲ್ಲಿದ್ದರು.

ಕಾಂಗ್ರೆಸ್ ತೊರೆದಿರುವ ಖುಸ್ಬೂ ಬಿಜೆಪಿ ಸೇರಲಿದ್ದು, ಅವರು ಬರುವ ತಮಿಳುನಾಡಿನ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸ ಲಿದ್ದಾರೆ ಎನ್ನಲಾಗಿದೆ.