ಗುರುವಾರ ಸಂಜೆ 4 ರಿಂದ ಆರಂಭವಾದ ರಕ್ಷಣಾ ಕಾರ್ಯಾಚರಣೆಯು ಮಧ್ಯರಾತ್ರಿ 12:30(ಶುಕ್ರವಾರ) ವರೆಗೆ ನಡೆಯಿತು. ಮಗು ಬೋರ್‌ವೆಲ್‌ನಲ್ಲಿ ಸಿಲುಕಿಕೊಂಡಾಗ ಸಿಲಿಂಡರ್ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಮಗುವನ್ನು ಇತರ ಮಕ್ಕಳೊಂದಿಗೆ ಮಧ್ಯಾಹ್ನ ತೆರೆದ ಪ್ರದೇಶದಲ್ಲಿ ಆಟವಾಡಲು ಬಿಟ್ಟಿದ್ದರು. ಮಗುವೊಂದು ಬಂದು ನನ್ನ ಮಗು ಬೋರ್‌ವೆಲ್‌ಗೆ ಬಿದ್ದಿದೆ ಎಂದು ನನಗೆ ತಿಳಿಸಿತು. ನಾನು ಹತ್ತಿರದ ಎಲ್ಲರಿಗೂ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದೆ. ಅಧಿಕಾರಿಗಳು ಒಳಗೆ ಬಂದು ರಕ್ಷಣಾ ಕಾರ್ಯಾಚರಣೆ ಯನ್ನು ಪ್ರಾರಂಭಿಸಿದರು. ರಕ್ಷಣಾ ಕಾರ್ಯಾಚರಣೆಯಲ್ಲಿ, ಸೇನಾ ಸಿಬ್ಬಂದಿ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತಕ್ಕೆ ಸಹಕಾರ ನೀಡಿವೆ ಎಂದು ತಾಯಿ ರಾಮಸಖಿ ಕುಶ್ವಾಹಾ ತಿಳಿಸಿದ್ದಾರೆ.