Friday, 20th September 2024

ಬಾಲಕಿ ನಾಪತ್ತೆ ಪ್ರಕರಣ: ದಿಲ್ಲಿ ಪೊಲೀಸರ ಕೈಗೆ ಕೇಸ್‌

ನವದೆಹಲಿ: ಅಪಹರಣಕ್ಕೊಳಗಾಗಿ ಎರಡು ತಿಂಗಳು ನಾಪತ್ತೆಯಾಗಿದ್ದ ಬಾಲಕಿ(13 ವರ್ಷ) ಸಂಬಂಧಿತ ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಪೊಲೀಸ ರಿಂದ ದಿಲ್ಲಿ ಪೊಲೀಸರಿಗೆ ತಕ್ಷಣ ವರ್ಗಾಯಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರ ತನಿಖೆಯಿಂದ ಅಸಮಾಧಾನ ಹೊಂದಿರುವ ಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ದಿಲ್ಲಿ ಪೊಲೀಸರಿಗೆ ಹಸ್ತಾಂತರಿಸುವಂತೆ ಸೆ.1ರ ವಿಚಾರಣೆ ವೇಳೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿತ್ತು. ಇದರ ಮರುದಿನವೇ ದಿಲ್ಲಿ ಪೊಲೀಸರು ನಾಪತ್ತೆಯಾಗಿದ್ದ ಬಾಲಕಿ ಯನ್ನು ಕೊಲ್ಕತ್ತಾದಲ್ಲಿ ಪತ್ತೆ ಹಚ್ಚಿದ್ದರಲ್ಲದೆ ಆಕೆಯ ಅಪಹರಣಕಾರ, ದಿಲ್ಲಿ ನಿವಾಸಿಯೊಬ್ಬನನ್ನು ಬಂಧಿಸಿದ್ದರು.