Sunday, 15th December 2024

 ‘ಕಿಡ್ನಿ, ಲಿವರ್ ಮಾರಾಟಕ್ಕಿದೆ’, ಹೀಗೊಂದು ಪೋಸ್ಟರ್‌…!

ತಿರುವನಂತಪುರಂ: ತಿರುವನಂತಪುರದ ಮಣಕೌಡ್ ಎಂಬಲ್ಲಿನ ಮನೆಯೊಂದರ ಮುಂದೆ ಕಾಣಿಸಿಕೊಂಡ ಪೋಸ್ಟರ್ ಇದು.
ಜಾಹೀರಾತಿನ ಜೊತೆಗೆ ಎರಡು ಫೋನ್ ನಂಬರ್ಗಳನ್ನು ಸಹ ನೀಡಲಾಗಿದೆ. ಸಂಖ್ಯೆಗಳನ್ನು ಡಯಲ್ ಮಾಡಿ ದಾಗ, ಅವು ಅಸಲಿ ಎಂದು ಕಂಡುಬಂದಿದೆ. ಮಣಕೌಡ್ ಪುಥೇನ್ ರಸ್ತೆಯ ಸಂತೋಷ್ ಕುಮಾರ್ (50) ಎಂಬಾ ತನೇ ಈ ಬೋರ್ಡ್ ಹಾಕಿದ್ದ.

ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗೋಣಿಚೀಲ ಎತ್ತುವ ವೇಳೆ ಅಪಘಾತ ಸಂಭವಿಸಿದೆ ಎಂದು ಸಂತೋಷ್ ತಿಳಿಸಿದ್ದಾರೆ. ಚಿಕಿತ್ಸೆಗೆ ಒಳಗಾಗ ಬೇಕಾಗಿದ್ದ ಅವರ ಬಳಿ ಈಗ ಹಣವಿಲ್ಲ. ಮಣಕೌಡ್ ಜಂಕ್ಷನ್ನಲ್ಲಿ ರುವ ಕುಟುಂಬದ ಭೂಮಿಯ ಒಂದು ಭಾಗವನ್ನು ಮಾರಾಟ ಮಾಡಲು ಅವರು ಬಯಸಿದ್ದರು. ಆದರೆ, ಜಮೀನಿನ ವಿಚಾರವಾಗಿ ಸಹೋದರನ ಜತೆ ಜಗಳವಾಗಿತ್ತು.

ತನ್ನ ಪತ್ನಿ ಕೆಲವು ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಕೋವಿಡ್-19 ನಂತರ ಅದೂ ನಿಂತು ಹೋಯಿತು ಎನ್ನುತ್ತಾರೆ ಸಂತೋಷ್. ಅಂತಹ ಕಠಿಣ ಪರಿಸ್ಥಿತಿಯಲ್ಲಿ, ತಮ್ಮ ಪ್ರಮುಖ ಅಂಗಗಳನ್ನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ಮಾರ್ಗವಿಲ್ಲ ಎಂದು ಕುಟುಂಬ ಹೇಳಿದೆ.