Thursday, 12th December 2024

ಇಶಾ ಅಂಬಾನಿ- ಆನಂದ್‌ ಪಿರಮಲ್‌ ದಂಪತಿಗೆ ಅವಳಿ ಮಕ್ಕಳ ಜನನ

ಮುಂಬೈ: ಉದ್ಯಮಿ ಮುಕೇಶ್‌ ಅಂಬಾನಿ ಪುತ್ರಿ ಇಶಾ ಅಂಬಾನಿ ಹಾಗೂ ಆನಂದ್‌ ಪಿರಮಲ್‌ ದಂಪತಿಗೆ ಅವಳಿ ಮಕ್ಕಳ ಜನನವಾಗಿದೆ. ಹೆಣ್ಣು ಮಗು ವಿಗೆ ಆದಿಯಾ ಮತ್ತು ಗಂಡು ಮಗುವಿಗೆ ಕೃಷ್ಣ ಎಂದು ನಾಮಕರಣ ಮಾಡ ಲಾಗಿದೆ.

ಅವಳಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಅಂಬಾನಿ ಹಾಗೂ ಪಿರಮಲ್‌ ಕುಟುಂಬ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.

ಆದಿಯಾ ಮತ್ತು ಕೃಷ್ಣ, ಇಶಾ ಮತ್ತು ಆನಂದ್‌ಗೆ ಈ ಶುಭ ಸಂದರ್ಭದಲ್ಲಿ ನಿಮ್ಮ ಆಶೀರ್ವಾದವನ್ನು ಬಯಸುತ್ತಿದ್ದೇವೆ ಎಂದು ಕುಟುಂಬಗಳು ಜಂಟಿ ಹೇಳಿಕೆ ಬಿಡುಗಡೆಗೊಳಿಸಿವೆ. 2018ರ ಡಿಸೆಂಬರ್‌ನಲ್ಲಿ ಇಶಾ ಅಂಬಾನಿ ಮತ್ತು ಆನಂದ್‌ ಪಿರಮಲ್‌ ಅವರಿಗೆ ವಿವಾಹವಾಗಿತ್ತು.