Saturday, 14th December 2024

ಒತ್ತಡಕ್ಕೆ ಮಣಿದ ಫೇಸ್ಬುಕ್‌: ಕಿಸಾನ್​ ಏಕ್ತಾ ಮೋರ್ಚಾ ಖಾತೆ ಮತ್ತೆ ಸಕ್ರಿಯ

ನವದೆಹಲಿ: ಕಿಸಾನ್​ ಏಕ್ತಾ ಮೋರ್ಚಾ ಖಾತೆಯನ್ನ ಅಳಿಸಿ ಹಾಕಿದ್ದ ಫೇಸ್​ಬುಕ್​ ಸಂಸ್ಥೆ ಮತ್ತೆ ಈ ಖಾತೆಯನ್ನ ಸಕ್ರಿಯ ಗೊಳಿಸಿದೆ.

ಸೋಮವಾರ ರೈತರು ಸ್ವರಾಜ್​ ಭಾರತದ ಮುಖಂಡ ಯೋಗೇಂದ್ರ ಯಾದವ್​ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂಬ ಘೋಷಣೆ ಬೆನ್ನಲ್ಲೇ ಈ ಖಾತೆಯನ್ನ ಅಳಿಸಿ ಹಾಕಲಾಗಿತ್ತು.

ಕೃಷಿ ಮಸೂದೆ ವಿರೋಧಿಸಿ ರೈತರ ಹೋರಾಟವನ್ನ ಬೆಂಬಲಿಸಿ ಈ ಖಾತೆಯಲ್ಲಿ ಪೋಸ್ಟ್​ಗಳನ್ನ ಶೇರ್​ ಮಾಡಲಾಗುತ್ತಿತ್ತು. ಆದರೆ ಈ ಖಾತೆ ಸಮಾಜಕ್ಕೆ ವಿರೋಧವಾಗಿದೆ ಎಂದು ಆರೋಪಿಸಿ ಫೇಸ್​ಬುಕ್​ ಈ ಖಾತೆಯನ್ನ ಅಳಿಸಿಹಾಕಿತ್ತು.

ಇದರ ಸ್ಕ್ರೀನ್​ಶಾಟ್​ಗಳನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ ರೈತ ಬೆಂಬಲಿಗರು ಫೇಸ್​ಬುಕ್​ ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿ ದ್ದರು. ಸಾಕಷ್ಟು ವಿರೋಧ ಹಾಗೂ ಟೀಕೆಗಳನ್ನ ಎದುರಿಸಿದ ಬಳಿಕ ಫೇಸ್​ಬುಕ್​ ಸಂಸ್ಥೆ ಇದೀಗ ಈ ಖಾತೆಯನ್ನ ಮರು ಸ್ಥಾಪಿಸಿದೆ.