Sunday, 17th November 2024

Kiss Away The Calories: ಕಿಸ್‌ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆಯಂತೆ!

ಕಿಸ್‌ ಅಥವಾ ಮುತ್ತು ಈ ಶಬ್ದ ಕೇಳುತ್ತಲೇ ಕೆನ್ನೆ ಕೆಂಪಡರುತ್ತದೆ. ಇದಕ್ಕಿರುವ ಶಕ್ತಿಯೇ ಅಂಥದ್ದು. ಸಾಮಾನ್ಯವಾಗಿ ಎಲ್ಲರೂ ಚಿಕ್ಕ ಮಕ್ಕಳ ಮುದ್ದಾದ ಕೆನ್ನೆಗೆ ಕಿಸ್ (Kiss Away the Calories) ಮಾಡುತ್ತಾರೆ. ಅಲ್ಲದೇ  ನಾವು ತುಂಬಾ ಪ್ರೀತಿಸುವ ವ್ಯಕ್ತಿಗಳಿಗೆ ಕಿಸ್ ಮಾಡುತ್ತೇವೆ. ಆದರೆ ಕಿಸ್‍ ಮಾಡುವುದು ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುವ ಒಂದು ಭಾವನೆ ಮಾತ್ರವಲ್ಲ, ಇದು ಕ್ಯಾಲೊರಿಗಳನ್ನು ಸುಡುತ್ತದೆ ಕೂಡ! ರೋಗನಿರೋಧಕ ಶಕ್ತಿಯನ್ನೂ ಬಲಪಡಿಸುತ್ತದೆಯಂತೆ! ಹಾಗಾದ್ರೆ ಅದರ ಜೊತೆಗೆ ಕಿಸ್‍ನ ಬಗ್ಗೆ ಇರುವಂತಹ ಇನ್ನೂ ಅನೇಕ ಆಸಕ್ತಿದಾಯಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ.

Kiss Away the Calories
  • ಸಾಮಾನ್ಯವಾದ ಕಿಸ್‍ ನಿಮಿಷಕ್ಕೆ 6.4 ಕ್ಯಾಲೊರಿಗಳನ್ನು ಸುಡುತ್ತದೆ. ಭಾವೋದ್ರಿಕ್ತವಾಗಿ ಕಿಸ್ ಮಾಡುವುದರಿಂದ  ನಿಮಿಷಕ್ಕೆ 20 ಕ್ಯಾಲೊರಿಗಳನ್ನು ಸುಡಬಹುದು. ಒಬ್ಬ ವ್ಯಕ್ತಿ ಈಜುವುದರಿಂದ, ಹಗ್ಗದ ಜೊತೆ ಜಂಪಿಂಗ್ ಮಾಡುವುದರಿಂದ ಒಂದು ನಿಮಿಷದಲ್ಲಿ 12 ಕ್ಯಾಲೊರಿಗಳನ್ನು ಸುಡಬಹುದು. ಆದರೆ ಕಿಸ್ ಮಾಡುವುದರಿಂದ ಅದಕ್ಕಿಂತ ಹೆಚ್ಚು ಕ್ಯಾಲೋರಿ ಸುಡಬಹುದಂತೆ!
  • ಒಬ್ಬರಿಗೆ ಕಿಸ್‍ ಮಾಡಲು 12 ಸೆಕೆಂಡುಗಳು ಬೇಕಾಗುತ್ತದೆಯಂತೆ. ಆದರೆ  1980ರ ದಶಕದಲ್ಲಿ ದಂಪತಿಯೊಬ್ಬರು ತುಂಬಾ ಬೇಗನೆ ಕಿಸ್‍ ನೀಡಿ ಮುಗಿಸಿದ್ದಾರೆ. ಅವರು ಕಿಸ್ ಮಾಡಲು ಕೇವಲ 5.5 ಸೆಕೆಂಡುಗಳ ಕಾಲ ತೆಗೆದುಕೊಂಡಿದ್ದಾರೆ. ಇದೂ ಒಂದು ದಾಖಲೆಯಾಗಿದೆ!
  • ಸಾರ್ವಜನಿಕ ಸ್ಥಳಗಳಲ್ಲಿ ಕಿಸ್‍ ಮಾಡಲು ಎಲ್ಲಾ ಕಡೆ ಅನುಮತಿ ಇರುವುದಿಲ್ಲ. ಕೆಲವು ದೇಶಗಳಲ್ಲಿ ಭಾನುವಾರದಂದು ಮಹಿಳೆಯರನ್ನು ಸಾರ್ವಜನಿಕವಾಗಿ ಚುಂಬಿಸುವುದನ್ನು ನಿಷೇಧಿಸಲಾಗಿದೆ.
  • ಸ್ಟಿಂಗಿ ಕಿಸ್ಸರ್‌ ದೇಶಗಳ ಪಟ್ಟಿಯಲ್ಲಿ ಸ್ವೀಡನ್ ನಂತರ ಜರ್ಮನಿಯು ಎರಡನೇ ಸ್ಥಾನದಲ್ಲಿದೆ. ಫ್ರಾನ್ಸ್ ಮತ್ತು ಇಟಲಿಯ ಜನ ತುಂಬಾ ಚೆನ್ನಾಗಿ ಕಿಸ್  ಮಾಡುತ್ತಾರೆ. ಅವರು ದಿನಕ್ಕೆ ಸರಾಸರಿ ಏಳು ಬಾರಿ ಕಿಸ್ ಮಾಡಿಕೊಳ್ಳುತ್ತಾರಂತೆ.
  • ಸಂಶೋಧಕರು ಫಿಲೆಮಟಾಲಜಿ ಎಂಬ ವಿಜ್ಞಾನ ಕ್ಷೇತ್ರದಲ್ಲಿ ಕಿಸ್‍ನ ಬಗ್ಗೆ  ಅಧ್ಯಯನ ಮಾಡಿದ್ದಾರೆ. ಅದರಲ್ಲಿ ಕಿಸ್ ಮಾಡುವಾಗ ಮೂವರಲ್ಲಿ ಇಬ್ಬರು ತಮ್ಮ ತಲೆಯನ್ನು ಬಲಕ್ಕೆ ಬಾಗಿಸುವುದನ್ನು ಅವರು ಕಂಡುಹಿಡಿದಿದ್ದಾರೆ.
  • ಇನ್ನು ಕಿಸ್‌ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಲಾಲಾರಸದ ಹರಿವನ್ನು ಹೆಚ್ಚಿಸುತ್ತದೆಯಂತೆ. ಹಾಗೆಯೇ ಇದು ಹೃದಯದ ಒತ್ತಡವನ್ನು ನಿವಾರಿಸುತ್ತದೆಯಂತೆ.
  • ರಸ್ತೆ ಅಪಘಾತವನ್ನು ತಡೆಯಲು ಕಿಸ್ ಬಹಳ ಸಹಕಾರಿಯಾಗಿದೆ ಎನ್ನುತ್ತದೆ ಅಧ್ಯಯನವೊಂದು. ಯಾಕೆಂದರೆ ತಮ್ಮ ಸಂಗಾತಿಗೆ ಕಿಸ್ ಮಾಡಿ ಹೊರಗೆ ಹೋಗುವವರು ಬಹಳ ಎಚ್ಚರಿಕೆಯಿಂದ ರೋಡ್ ಕ್ರಾಸ್ ಮಾಡುತ್ತಾರೆ. ಇದರಿಂದ ಅಪಘಾತಗಳು ನಡೆಯುವುದು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ಡ್ರೈವಿಂಗ್ ಮಾಡುವಾಗ ಕಿಸ್ ಮಾಡುವುದು ಒಳ್ಳೆಯದಲ್ಲ!
Kiss Away the Calories
  • ಜನ ಕಿಸ್ ಮಾಡುವ ರೀತಿ  ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭಿನ್ನವಾಗಿರುತ್ತದೆ. ಫ್ರಾನ್ಸ್‌ನಲ್ಲಿ ಒಮ್ಮೆಲೆ ಮೂರು ಬಾರಿ ಕೆನ್ನೆಗೆ ಕಿಸ್ ಮಾಡುತ್ತಾರೆ.  ಆದರೆ ಜಪಾನ್‍ನಲ್ಲಿ ಸಂಗಾತಿಗಳಿಬ್ಬರೂ ಲೈಂಗಿಕತೆಯನ್ನು ಬಯಸಿದರೆ ಮಾತ್ರ ಕಿಸ್‍ ನೀಡುತ್ತಾರಂತೆ.
  • ಮನುಷ್ಯರು ಕಿಸ್ ಮಾಡಿ ಪ್ರೀತಿಯನ್ನು ವ್ಯಕ್ತಪಡಿಸಿದರೆ ಪ್ರಾಣಿ-ಪಕ್ಷಿಗಳು ಕೂಡ ತಮ್ಮ ಪ್ರೀತಿಯನ್ನು ಕೆಲವು ಚಿಹ್ನೆಗಳ ಮೂಲಕ ವ್ಯಕ್ತಪಡಿಸುತ್ತವೆ. ಪಕ್ಷಿಗಳು ತಮ್ಮ ಕೊಕ್ಕುಗಳನ್ನು ಸ್ಪರ್ಶಿಸುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ, ಮತ್ತು ಆನೆಗಳು ತಮ್ಮ ಸೊಂಡಿಲುಗಳನ್ನು ಪರಸ್ಪರರ ಬಾಯಿಗೆ ಹಾಕುವ ಮೂಲಕ ತಮ್ಮ ಸಂಗಾತಿಗೆ ಪ್ರೀತಿಯನ್ನು ತೋರಿಸುತ್ತವೆ.
  • ಕಿಸ್‍ ಮಾಡುವುದು  100 ಶತಕೋಟಿ ನರಕೋಶಗಳನ್ನು ಉತ್ತೇಜಿಸುತ್ತದೆ. ಅದರ ಜೊತೆಗೆ  ಸಂತೋಷದ ಹಾರ್ಮೋನುಗಳು ನಮ್ಮ ದೇಹದಲ್ಲಿ ಹೆಚ್ಚು ಉತ್ಪತ್ತಿಯಾಗುತ್ತದೆ. ನಮ್ಮ ಹೃದಯವು ವೇಗವಾಗಿ ಬಡಿದುಕೊಳ್ಳುತ್ತವೆ. ರಕ್ತದೊತ್ತಡ ಮತ್ತು ದೇಹದ ತಾಪಮಾನವೂ ಹೆಚ್ಚಾಗುತ್ತದೆಯಂತೆ.
  • ಆದರೆ ಕಿಸ್‍ ಮಾಡುವ ಮೂಲಕ ಜನರು  60 ಮಿಲಿಗ್ರಾಂ ನೀರು, 0.5 ಮಿಲಿಗ್ರಾಂ ಪ್ರೋಟೀನ್, 0.15 ಮಿಲಿಗ್ರಾಂ ಗ್ರಂಥಿ ಸ್ರವಿಸುವಿಕೆ, 0.4 ಮಿಲಿಗ್ರಾಂ ಉಪ್ಪು ಮತ್ತು 22,000 ಬ್ಯಾಕ್ಟೀರಿಯಾಗಳನ್ನು ಹಂಚಿಕೊಳ್ಳುತ್ತಾರೆ ಎನ್ನುವುದು ಅಧ್ಯಯನದಿಂದ ಕಂಡು ಬಂದಿದೆ.

ಇದನ್ನೂ ಓದಿ: ನಾರ್ವೆಯ ಯುವರಾಜನೊಂದಿಗೆ ಹ್ಯಾಂಡ್‍ಶೇಕ್‌ ಮಾಡಲೊಪ್ಪದ ಮುಸ್ಲಿಂ ಮಹಿಳೆ!

  • ಕಿಸ್‍ನಲ್ಲಿ ಯಾವೆಲ್ಲ ವಿಚಾರಗಳು ಅಡಗಿವೆ ಎಂಬುದನ್ನು ನೀವು ಈಗ ತಿಳಿದುಕೊಂಡಿದ್ದೀರಿ.  ಈ ರೀತಿ ಕಿಸ್‍ನ ಬಗ್ಗೆ ಇರುವಂತಹ ಈ ಆಸಕ್ತಿದಾಯಕ ವಿಷಯಗಳನ್ನು ಕೇಳಿ ನಿಮಗೂ ಆಶ್ಚರ್ಯವಾಗಿರಬಹುದು. ಆದರೆ ಇದು ನಿಜ.