Thursday, 12th December 2024

Kolkata blast: ಕೋಲ್ಕತ್ತಾದಲ್ಲಿ ಏನಾಗ್ತಿದೆ? ಒಂದೆಡೆ ವೈದ್ಯರ ಪ್ರೊಟೆಸ್ಟ್‌, ಮತ್ತೊಂದೆಡೆ ಭಾರೀ ಬ್ಲಾಸ್ಟ್‌; NIA ತನಿಖೆಗೆ ಆಗ್ರಹ

Kolkata blast

ಕೋಲ್ಕತ್ತಾ: ಪ‍ಶ್ಚಿಮ ಬಂಗಾಳ(West Bengal)ದಲ್ಲಿ ಭಾರೀ ಸ್ಫೋಟವೊಂದು ಸಂಭವಿಸಿದ್ದು, 58 ವರ್ಷದ ಕಸ ಹೆಕ್ಕುವ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೋಲ್ಕತ್ತಾ(Kolkata blast)ದ ಎಸ್‌.ಎನ್‌. ಬ್ಯಾನರ್ಜಿ ರಸ್ತೆಯಲ್ಲಿ ಮಧ್ಯಾಹ್ನ ಈ ದುರಂತ ಸಂಭವಿಸಿದೆ. ಇದು ಆಕಸ್ಮಿಕ ಘಟನೆ ಅಲ್ಲ. ಇದೊಂದು ಪೂರ್ವಯೋಜಿತ ಘಟನೆ ಎಂದಿರುವ ಬಿಜೆಪಿ ಎನ್‌ಐಎ ತನಿಖೆಗೆ ಆಗ್ರಹಿಸಿದೆ.

ಬ್ಲೋಚ್‌ಮನ್‌ ಸ್ಟ್ರೀಟ್‌ನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಸ ಹೆಕ್ಕುವ ವ್ಯಕ್ತಿಯ ಬಲಗೈಗೆ ಗಂಭೀರ ಗಾಯಗಳಾಗಿವೆ. ಘಟನೆ ಬಗ್ಗೆ ವರದಿಯಾಗ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಬಾಂಬ್‌ ನಿಷ್ಕ್ರೀಯ ದಳ ತಪಾಸಣೆ ನಡೆಸಿದೆ. ಸ್ಥಳದಲ್ಲಿ ಅನುಮಾನಾಸ್ಪದವಾಗಿ ಗೋನಿ ಚೀಲವೊಂದು ಪತ್ತೆಯಾಗಿದ್ದು, ಬಾಂಬ್‌ ನಿಷ್ಕ್ರೀಯ ದಳ ಅದನ್ನು ವಶಕ್ಕೆ ಪಡೆದಿದೆ.

ಇದೀಗ ಈ ಘಟನೆ ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಇದೊಂದು ಪೂರ್ವ ನಿಯೋಜಿತ ದುಷ್ಕೃತ್ಯ ಎಂದು ಹೇಳಿರುವ ಬಿಜೆಪಿ, ಪ್ರಕರಣವನ್ನು ಎನ್‌ಐಎ(NIA) ತನಿಖೆಗೊಪ್ಪಿಸುವಂತೆ ಬಿಜೆಪಿ ಪಟ್ಟು ಹಿಡಿದಿದೆ. ಮತ್ತೊಂದೆಡೆ ಘಟನೆ ಬಗ್ಗೆ ಸವಿಸ್ತಾರವಾದ ತನಿಗೆ ಆದೇಶಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಒತ್ತಾಯಿಸಿದೆ.

ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ್‌ ಮಜುಮ್ದಾರ್‌ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ಘಟನೆಯ ಗಂಭೀರತೆಯನ್ನು ಗಮನಿಸಿದಾಗ ಇದೊಂದು ಅತ್ಯಂತ ಕಳವಳಕಾರಿಯಾದ ವಿಚಾರವಾಗಿದೆ. ಹೀಗಿರುವಾಗ ಈಬಗ್ಗೆ ಸೂಕ್ತ ತನಿಖೆ ನಡೆಲೇಬೇಕು. ಎಲ್ಲಾ ಆಯಾಮಗಳಿಂದ ಸವಿಸ್ತಾರವಾದ ತನಿಖೆ ನಡೆಸಬೇಕು. ಈ ವಿಚಾರದಲ್ಲಿ ಗೃಹ ಇಲಾಖೆ ಎನ್‌ ಐಎ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Mamata Banerjee : ವೈದ್ಯರ ಅಸಹಾಕಾರ; ರಾಜೀನಾಮೆ ನೀಡಲು ಮುಂದಾದ ಮಮತಾ ಬ್ಯಾನರ್ಜಿ!