ಕೋಲ್ಕತ್ತಾ : ಪಶ್ಚಿಮ ಬಂಗಾಳದ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿ, ಮಹಿಳೆಯರ ಮೇಲಿನ ಕೊಲೆ ಮತ್ತು ಅತ್ಯಾಚಾರ ಅಪರಾಧಗಳ ಪ್ರಕರಣ ಗಳ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯ ಸಿಬಿಐ ತನಿಖೆಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಜುಲೈನಲ್ಲಿ ಸಲ್ಲಿಸಿದ ವರದಿಯಲ್ಲಿ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜ್ಯದಲ್ಲಿ ನಡೆದ ಚುನಾವಣೋ ತ್ತರ ಹಿಂಸಾಚಾರವು ‘ಸಾವಿರಾರು ಜನರ ಜೀವನ ಮತ್ತು ಜೀವನೋಪಾಯಕ್ಕೆ ಅಡ್ಡಿಯಾಗಿದೆ. ಅವರ ಆರ್ಥಿಕ ಕತ್ತು ಹಿಸುಕುವಿಕೆಗೆ ಕಾರಣವಾಗಿದೆ. ರಾಜ್ಯದ ಪರಿಸ್ಥಿತಿಯು ‘ಕಾನೂನಿನ ನಿಯಮ’ದ ಬದಲಿಗೆ ‘ಆಳುವ ಕಾನೂನು’ ನ ಅಭಿವ್ಯಕ್ತಿಯಾಗಿದೆ ಎಂದು ಹೇಳಿತ್ತು.
ಜುಲೈ 13ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ಮತ್ತು ಜುಲೈ 15ರಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೀಡಿದ ವರದಿಯಲ್ಲಿ ಎನ್ ಎಚ್ ಆರ್ ಸಿ ರಾಜ್ಯ ಸರ್ಕಾರದ ‘ಭಯಾನಕ ನಿರಾಸಕ್ತಿ’ಯನ್ನು ತೋರಿಸುತ್ತದೆ. ಆಡಳಿತಾ ರೂಢ ಟಿ.ಎಂ.ಸಿ.ಯ ಬೆಂಬಲಿಗರು ಬಿಜೆಪಿಯ ಬೆಂಬಲಿಗರ ವಿರುದ್ಧ ನಡೆಸಿದ ಹಿಂಸಾಚಾರವನ್ನು ಖಂಡಿಸಿತ್ತು.
ಅತ್ಯಾಚಾರ ಮತ್ತು ಕೊಲೆಯಂತಹ ಘೋರ ಅಪರಾಧಗಳನ್ನು ಸಿಬಿಐ ತನಿಖೆ ನಡೆಸಿ ರಾಜ್ಯದ ಹೊರಗಿನ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಸಬೇಕು ಎಂದು ಎನ್ ಎಚ್ ಆರ್ ಸಿ ಸೂಚಿಸಿತ್ತು. ಆದಾಗ್ಯೂ, ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯನ್ನು ನಿರಾಕರಿಸಲು ಕಲ್ಕತ್ತಾ ಹೈಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿತು.