Sunday, 15th December 2024

ದೈಹಿಕ ಹಲ್ಲೆ ಸಹಿಸಲಾಗದೆ ಮದ್ಯವ್ಯಸನಿ ಮಗನ ಹತ್ಯೆ

ಕೋಲ್ಕತ್ತಾ: ನಿರಂತರ ದೈಹಿಕ ಹಲ್ಲೆ ಸಹಿಸಲಾಗದೆ ಮದ್ಯವ್ಯಸನಿ ಮಗನನ್ನೇ ಕಡಿದು ಕೊಂದಿರುವ ಘಟನೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಮಟಿಗರ ಬ್ಲಾಕ್‌ನಲ್ಲಿ ನಡೆದಿದೆ.

ಮೃತನನ್ನು ಬಿಶಾಲ್ ಶಬರ್ (30) ಎಂದು ಗುರುತಿಸಲಾಗಿದೆ. ಈತನ ತಂದೆ ಕುತನು ಶಬರ (55) ಅವರನ್ನು ಮತ್ತಿಗಾರ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉತ್ತರ ಬಂಗಾಳದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.

ಸ್ಥಳೀಯರ ಪ್ರಕಾರ, ಯಾವಾಗಲೂ ಮದ್ಯದ ಅಮಲಿನಲ್ಲಿ ಮನೆಗೆ ಬಂದು ಪೋಷಕರ ಮೇಲೆ ಹಲ್ಲೆ ಮಾಡುವುದು ನಿತ್ಯದ ಸಂಗತಿಯಾಗಿದೆ. ತನ್ನ ಗಂಡನ ನಡವಳಿಕೆಯಿಂದ ಹೆಂಡತಿಯೂ ಬೇಸತ್ತು ಹೋಗಿದ್ದಳೆ. ದಿನನಿತ್ಯದ ದೈಹಿಕ ಚಿತ್ರಹಿಂಸೆ ಮತ್ತು ಹಲ್ಲೆ ಅವ್ಯಾಹತವಾಗಿ ಮುಂದುವರಿದಾಗ, ಸೋಮವಾರ ತಡರಾತ್ರಿ ಆ ವ್ಯಕ್ತಿ ತನ್ನ ಮಗನ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಂದಿದ್ದಾನೆ.