Thursday, 12th December 2024

ಚುನಾವಣಾ ಪ್ರಚಾರದ ವೇಳೆ ಸಂಸದ ಪ್ರಭಾಕರ್ ರೆಡ್ಡಿಗೆ ಇರಿತ

ಹೈದರಾಬಾದ್: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಸಂಸದ ಕೋಥಾ ಪ್ರಭಾಕರ್ ರೆಡ್ಡಿ ಅವರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ.

ರ್ಯಾಲಿಯಲ್ಲಿ ದಾಳಿಕೋರನನ್ನ ಬಿಆರ್‌ಎಸ್ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ. ದಾಳಿ ನಡೆ ದಾಗ ಸಂಸದರು ಪಾದ್ರಿಯ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು. ಸಂಸದ ರೆಡ್ಡಿ ಅವರನ್ನ ಚಿಕಿತ್ಸೆಗಾಗಿ ಗಜ್ವೆಲ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ತೆಲಂಗಾಣ ಸಂಸದ ಕೋತಾ ಪ್ರಭಾಕರ್ ರೆಡ್ಡಿ ಅವರು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಪಕ್ಷದ ದುಬ್ಬಾಕ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾಗಿದ್ದಾರೆ.
57 ವರ್ಷದ ಪ್ರಭಾಕರ್ ರೆಡ್ಡಿ ಅವರು ದುಬ್ಬಾಕ್ ಪ್ರದೇಶದ ಸೂರಂಪಲ್ಲಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾಗ ದಾಳಿ ನಡೆಸ ಲಾಗಿದೆ.