ನವದೆಹಲಿ: ಸಿಖ್ ಧರ್ಮ ಗುರು ಗೋವಿಂದ್ ಸಿಂಗ್ ಅವರ ಜನ್ಮ ದಿನದ ಪ್ರಯುಕ್ತ ಆಚರಿಸುವ “ಪ್ರಕಾಶ್ ಪೂರಬ್” ಶುಭ ಸಂದರ್ಭದಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಶುಭಾಶಯ ಕೋರಿದರು.
ಸಿಖ್ ಧರ್ಮದ 10 ಗುರು, ಒಬ್ಬ ಉತ್ತಮ ಯೋಧ, ಕವಿ, ದಾರ್ಶನಿಕ ಮತ್ತು ಆಧ್ಯಾತ್ಮಿಕ ಗುರುವಾಗಿದ್ದರು ಎಂದರು. ಉಪರಾಷ್ಟ್ರ ಪತಿ ವೆಂಕಯ್ಯ ನಾಯ್ಡು ಅವರು ಗುರು ಗೋವಿಂದ್ ಅವರ ಜನ್ಮ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿ ದರು.
ಗುರುವಿನ ಬೋಧನೆಗಳು ಶಾಶ್ವತವಾಗಿದ್ದು, ಪ್ರಸ್ತುತವಾಗಿವೆ. ಮುಂದಿನ ಪೀಳಿಗೆಗೆ ಸೂರ್ತಿದಾಯಕವಾಗಿವೆ ಎಂದು ಟ್ವೀಟ್‍ನಲ್ಲಿ ಹೇಳಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್‍ನಲ್ಲಿ ಗುರು ಸಾಹೀಬ್ ಅವರ ಕೃಪೆ ನನ್ನ ಮೇಲೆ ವಿಶೇಷ ವಾಗಿದೆ. ಸಮಸ್ತ ಸಿಖ್ ಸಮುದಾಯಕ್ಕೆ 10ನೇ ಗುರು ಗೋವಿಂದ್ ಸಿಂಗ್ ಅವರ ಜನ್ಮ ದಿನದ ಶುಭಾಶಯ ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.