Saturday, 7th September 2024

ಕ್ರಾಂತಿಕಾರಿ ಬದಲಾವಣೆಗೆ ನೂತನ ಶಿಕ್ಷಣ ನೀತಿ ನಾಂದಿ: ಕೋವಿಂದ್‌

ಚೆನ್ನೈ: ನೂತನ ಶಿಕ್ಷಣ ನೀತಿಯು ಯುವಕರಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಹೇಳಿದರು.

ಚೆನ್ನೆನ ಅಣ್ಣಾ ವಿಶ್ವವಿದ್ಯಾನಲಯದ 41ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೋವಿಂದ್ ಅವರು, ಪ್ರಸ್ತುತ ವಿಕಾಸಗೊಳ್ಳುತ್ತಿರುವ ಅಗತ್ಯಗಳಿಗೆ ಸಂಬಂಧಿಸಿದ ಸಂಪನ್ಮೂಲಗಳ ಆಧಾರದ ಮೇಲೆ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುವ ಉದ್ದೇಶವನ್ನು ಹೊಸ ಶಿಕ್ಷಣ ನೀತಿ ಹೊಂದಿದೆ ಎಂದರು.

ಹೊಸ ಶಿಕ್ಷಣ ನೀತಿಯು ಶಿಕ್ಷಣ ಬದಲಾವಣೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ. ಸಾಮಾಜಿಕ ಪರಿವರ್ತನೆಯ ಅತ್ಯಂತ ಪ್ರಬಲ ಪ್ರತಿನಿಧಿಗಳು ವಿದ್ಯಾವಂತ ಯುವಕರಿಗೆ ಸರಿಯಾದ ನಿರ್ದೇಶನ ನೀಡಿದರೆ, ಇತಿಹಾಸದ ಹಾದಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯವಾಗಲಿದೆ. ಹೊಸಶಿಕ್ಷಣ ನೀತಿ, ಸಂಶೋಧನೆ, ಕೌಶಲ್ಯ, ಕುಶಾಗ್ರಮತಿ ಆಧಾರದ ಮೇಲೆ ಆಧುನಿಕ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತದೆ. ಇದು ಭವಿಷ್ಯದ ದೃಷ್ಟಿಕೋನಕ್ಕೆ ಅನುಗುಣವಾಗಿ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಳಗೊಂಡಿದೆ. ಇದರಿಂದ ನೈತಿಕ ಮೌಲ್ಯಗಳನ್ನು ಬೆಳೆಸುವ ಮತ್ತು ಭಾರತೀಯ ಸಂಸ್ಕೃತಿಯ ತಿಳುವಳಿಕೆಯನ್ನು ಉತ್ತೇಜಿಸುವತ್ತ ಗಮನಹರಿಸಲಿದೆ ಎಂದರು.

Leave a Reply

Your email address will not be published. Required fields are marked *

error: Content is protected !!