Saturday, 14th December 2024

ಮೂರು ದಿನ ಬಾಂಗ್ಲಾದೇಶ ಪ್ರವಾಸ ಕೈಗೊಂಡ ಕೋವಿಂದ್

Ramnath Kovind

ನವದೆಹಲಿ: ಬಾಂಗ್ಲಾದೇಶ ರಾಜಧಾನಿ ಢಾಕಾದಲ್ಲಿ ನೆರವೇರಲಿರುವ 50ನೇ ವಿಜಯ ದಿನ ಸಂಭ್ರಮಾಚರಣೆ ಯಲ್ಲಿ ಭಾಗವಹಿಸಲು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬುಧವಾರದಿಂದ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ.

ರಾಷ್ಟ್ರಪತಿಗಳು ಡಿ.15ರಿಂದ 17ರವರೆಗೆ ಮೂರು ದಿನಗಳ ಕಾಲ ಬಾಂಗ್ಲಾದೇಶ ಪ್ರವಾಸದಲ್ಲಿರುತ್ತಾರೆ. ರಾಷ್ಟ್ರಪತಿ ಕೋವಿಂದ್ ಅವರಿಗೆ ಬಾಂಗ್ಲಾದೇಶ ಅಧ್ಯಕ್ಷ ಅಬ್ದುಲ್ ಹಮೀದ್ ಆಹ್ವಾನ ನೀಡಿದ್ದರು.

ಭೇಟಿ ವೇಳೆ ರಾಷ್ಟ್ರಪತಿಗಳು ಅಲ್ಲಿನ ರಾಷ್ಟ್ರಪತಿ ಹಮೀದ್ ಜೊತೆಗೆ ನಿಯೋಗ ಮಟ್ಟದ ಮಾತುಕತೆ ನಡೆಸುತ್ತಾರೆ. ಈ ಮಧ್ಯೆ ಬಾಂಗ್ಲಾಗೇಶ ಪ್ರಧಾನಿ ಶೇಖ್ ಹಸೀನಾ ಮತ್ತು ವಿದೇಶಾಂಗ ಸಚಿವ ಡಾ ಎ ಕೆ ಅಬ್ದುಲ್ ಮೊಮೆನ್ ಅವರು ಸಹ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.