Friday, 22nd November 2024

Rahul Gandhi: ದಿಲ್ಲಿಯ ಸಲೂನ್‌ಗೆ ರಾಹುಲ್‌ ಗಾಂಧಿ ಭೇಟಿ- ಗಡ್ಡ ಟ್ರಿಮ್‌ ಮಾಡಿಸ್ಕೊಂಡು ಕ್ಷೌರಿಕನ ಜೊತೆ ಚಿಟ್‌ಚಾಟ್‌-ವಿಡಿಯೋ ವೈರಲ್‌

Rahul Gandhi

ದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ (Rahul Gandhi) ಇತ್ತೀಚಿನ ಆಗಾಗ ಜನ ಸಾಮಾನ್ಯರ ಜೊತೆಗೂಡಿಕೊಂಡು ಅವರ ಕಷ್ಟಗಳನ್ನು ಆಲಿಸುತ್ತಾ, ಅವರ ಜೊತೆ ಸಮಯ ಕಳೆಯುತ್ತಿರುತ್ತಾರೆ. ಅಂತಹ ವಿಡಿಯೋಗಳು ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಭಾರೀ ವೈರಲ್‌ ಆಗುತ್ತಿದೆ. ದೆಹಲಿಯ ಸ್ಥಳೀಯ ಕ್ಷೌರಿಕನ (Delhi Barber) ಅಂಗಡಿಗೆ ಭೇಟಿ ನೀಡಿದ ರಾಹುಲ್‌ ಗಾಂಧಿ ಬಡ ಅಂಗಡಿಯ ಮಾಲೀಕನ ಜತೆ ಸಮಯ ಕಳೆದಿದ್ದಾರೆ.

ದೆಹಲಿಯ (Dehli) ಉತ್ತಮ್‌ನಗರದಲ್ಲಿರುವ ಕ್ಲಾಸಿಕ್‌ ಹೇರ್‌ ಸಲೂನ್‌ಗೆ ಭೇಟಿ ನೀಡಿದರು. ಅಂಗಡಿ ಮಾಲೀಕನಿಂದ ಕ್ಷೌರ ಮಾಡಿಸಿಕೊಂಡ ಬಳಿಕ ಅಂಗಡಿಯವನ ಬಳಿ ಮಾತನಾಡಿದ್ದಾರೆ. ʼದಿನದ ಕೊನೆಯಲ್ಲಿ ಏನೂ ಉಳಿಯುವುದಿಲ್ಲʼ(ಕುಚ್‌ ನಹಿ ಬಚ್ತಾ) ಎನ್ನುವ ಶೀರ್ಷಿಕೆಯಡಿಯಲ್ಲಿ ಕ್ಷೌರಿಕನೊಂದಿಗಿನ ಮಾತುಕತೆ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಭಾರತದ ಪ್ರತಿಯೊಬ್ಬ ಕಷ್ಟಪಟ್ಟು ದುಡಿಯುವ ಬಡ ಮತ್ತು ಮಧ್ಯಮ ವರ್ಗದ ವ್ಯಕ್ತಿಯ ಕಥೆಯನ್ನು ಹೇಳುತ್ತದೆ ಎಂದು ಬರೆದುಕೊಂಡಿದ್ದಾರೆ.

ಕ್ಷೌರಿಕನೊಂದಿಗೆ ಮಾತನಾಡುತ್ತಾ, ಒಬ್ಬ ವ್ಯಕ್ತಿ 15 ಸಾವಿರದಿಂದ ರೂ.ನಿಂದ ಏನನ್ನೂ ಉಳಿಸಲು ಸಾಧ್ಯ? ನಿಮ್ಮ ಮನೆ ಬಾಡಿಗೆ ಎಷ್ಟಿದೆ ಎಂದು ಕೇಳುತ್ತಾರೆ. ಅದಕ್ಕುತ್ತರಿಸಿದ ಅಂಗಡಿಯ ಮಾಲೀಕ ಅಜಿತ್‌ ” 2500 ರೂ. ಮನೆ ಬಾಡಿಗೆ ಕಟ್ಟಿ , ಹೆಂಡತಿ ಮಕ್ಕಳನ್ನು ನೋಡಿಕೊಳ್ಳಬೇಕು ಹಾಗೂ ನನ್ನ ಹೆಂಡತಿ ಹೃದ್ರೋಗಿಯಾಗಿದ್ದು ಆಸ್ಪತ್ರೆ ಹಾಗೂ ಔಷಧಿ ಖರ್ಚು ಜಾಸ್ತಿ ಇದೆ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ನಾನು ತಿಂಗಳಿಗೆ 14 ರಿಂದ 15 ಸಾವಿರ ರೂ. ಸಂಪಾದಿಸುತ್ತೇನೆ. ಅಂಗಡಿ ಬಾಡಿಗೆ ಸಹ ಅದರಲ್ಲೇ ನೋಡಿಕೊಳ್ಳಬೇಕು. ಕಷ್ಟಪಟ್ಟು ದುಡಿದರೆ ಎನೋ ಜೀವನ ಸುಧಾರಿಸುತ್ತದೆ ಎಂದುಕೊಂಡಿದ್ದೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಅದು ಅಸಾಧ್ಯ. ಕಾಂಗ್ರೆಸ್‌ ಆಡಳಿತದಲ್ಲಿ ಈ ಪರಿಸ್ಥಿತಿ ಇರಲಿಲ್ಲ ನಾವು ನೆಮ್ಮದಿಯಿಂದ ಇದ್ದೆವು ಈಗ ಬೆಲೆಯೇರಿಕೆಯನ್ನು ಅನುಭವಿಸುತ್ತಿದ್ದೇವೆ. ಬಡವರು ಬಡವರಾಗಿಯೇ ಉಳಿಯಬೇಕು” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : Rahul Gandhi: ರಾಹುಲ್‌ ಗಾಂಧಿಗೆ ಬಿಗ್‌ ರಿಲೀಫ್‌; ಪಿಐಎಲ್‌ ವಜಾ, ದೂರುದಾರರಿಗೆ 25 ಸಾವಿರ ರೂ. ದಂಡ

ರಾಹುಲ್‌ ಗಾಂಧಿ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಅಜಿತ್‌ ಮಾತನಾಡಿದ್ದು “ಅವರಿಗೆ ಕ್ಷೌರ ಮಾಡುವಾಗ ನನ್ನ ಕೈಗಳು ನಡುಗುತ್ತಿದ್ದವು. ರಾಹುಲ್‌ ಗಾಂಧಿಯವರನ್ನು ಭೇಟಿಯಾಗಿರುವುದರ ಬಗ್ಗೆ ತುಂಬಾ ಖುಷಿಯಿದೆ. ಸಾಮಾನ್ಯ ಬಡ ಜನರನ್ನು ಗುರುತಿಸಿ ಮಾತನಾಡಿಸುವ ಮಾನವೀಯತೆ ಅವರಿಗಿದೆ “ಎಂದು ಭಾವುಕರಾದರು. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಾಹುಲ್‌ ಹಂಚಿಕೊಂಡಿದ್ದು, ದಿನದ ಕೊನೆಯಲ್ಲಿ ಎನೂ ಉಳಿಯುವುದಿಲ್ಲ ಎಂದು ಬೆರೆದುಕೊಂಡಿದ್ದಾರೆ. ಭಾರತದ ಪ್ರತಿಯೊಬ್ಬ ಬಡ ಹಾಗೂ ಮಧ್ಯಮ ವರ್ಗದವರ ಕಥೆ ಇದೇ ಆಗಿದೆ ಎಂದು ಹೇಳಿದ್ದಾರೆ.