Friday, 22nd November 2024

ಕುಲದೀಪ್ ಸಿಂಗ್’ರಿಗೆ ಎನ್‌ಐಎ ಡಿಜಿ ಹೊಣೆಗಾರಿಕೆ

ನವದೆಹಲಿ: ಸಿಆರ್ಪಿಎಫ್ ಡಿಜಿ ಕುಲದೀಪ್ ಸಿಂಗ್ ಅವರಿಗೆ ರಾಷ್ಟ್ರೀಯ ತನಿಖಾ ದಳದ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿ ದ್ದು, ಎನ್‌ಐಎ ಡಿಜಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಹಿಂದೆ ಎನ್‌ಐಎ ಡಿಜಿಯಾಗಿದ್ದ ವೈ.ಸಿ.ಮೋದಿ ಅವರು ಇದೇ ಸೋಮವಾರ ನಿವೃತ್ತಿಯಾಗಲಿದ್ದು, ಅವರ ಸ್ಥಾನಕ್ಕೆ ಸಿಆರ್ ಪಿಎಫ್ ಡಿಜಿ ಕುಲದೀಪ್ ಸಿಂಗ್ ಅವರನ್ನು ನಿಯೋಜಿಸಲಾಗಿದೆ.

ಮೋದಿ ಅವರು ಅಸ್ಸಾಂ-ಮೇಘಾಲಯ ಕೇಡರ್ ನ 1984 ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದು, 2017ರ ಸೆಪ್ಟೆಂಬರ್ ನಲ್ಲಿ ಉಗ್ರ ನಿಗ್ರಹದಳದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಇದೀಗ ಕಾಂಪಿಟೆಂಟ್ ಅಥಾರಿಟಿ ಕುಲದೀಪ್ ಸಿಂಗ್ ಅವರನ್ನು ಎನ್‌ಐಎ ಡಿಜಿಯಾಗಿ ಆಯ್ಕೆ ಮಾಡಿದೆ.

ಕುಲದೀಪ್ ಸಿಂಗ್ ಅವರು ಪ್ರಸ್ತುತ ಸಿಆರ್ ಪಿಎಫ್ ನ ಡಿಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಎನ್‌ಐಎ ಡಿಜಿ ಆಯ್ಕೆ ಯಾಗುವವರೆಗೂ ಹೆಚ್ಚವರಿ ಎನ್‌ಐಎ ಡಿಜಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.