Thursday, 12th December 2024

ವೋಡಾಫೋನ್ ಐಡಿಯಾದ ಕುಮಾರ್ ಮಂಗಳಂ ಬಿರ್ಲಾ ರಾಜೀನಾಮೆ

ನವದೆಹಲಿ : ಟೆಲಿಕಾಂ ನೆಟ್ ವರ್ಕ್ ವೋಡಾಫೋನ್ ಐಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಕಾರ್ಯನಿರ್ವಾಹಣಾಧಿಕಾರಿ ಕುಮಾರ್ ಮಂಗಳಂ ಬಿರ್ಲಾ ರಾಜೀನಾಮೆ ನೀಡಿದ್ದಾರೆ.

ಕುಮಾರ್ ಮಂಗಳಂ ಬಿರ್ಲಾ ತಮ್ಮ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯಿಂದ ಕೆಳಗಿಳಿದಿದ್ದು, ಈಗ ಆದಿತ್ಯ ಬಿರ್ಲಾ ಸಮೂಹದ ನಾಮನಿರ್ದೇಶಿತರಾದ ಹಿಮಾಂಶು ಕಪಾನಿಯಾ ಅವರನ್ನು ಕಾರ್ಯನಿರ್ವಾಹಣಾಧಿ ಕಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ ಎಂದು ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಮಾಹಿತಿ ನೀಡಿದೆ.

ಕೆಲವು ವರ್ಷಗಳಿಂದ ವೊಡಾಫೋನ್ ಐಡಿಯಾ ಕಂಪನಿ ಟೆಲಿಕಾಂ ಕ್ಷೇತ್ರದಲ್ಲಿ ಇತರೆ ಕಂಪೆನಿಗಳ ಪೈಪೋಟಿ ನೀಡಲು ಸಾಧ್ಯವಾಗದೇ, ನಷ್ಠ ಅನುಭವಿಸಿದ್ದು, ಕಾರ್ಯನಿರ್ವಹಣಾಧೀಕಾರಿಯನ್ನು ಬದಲಾವಣೆ ಮಾಡಿದೆ. ಕುಮಾರ್ ಮಂಗಳಂ ಬಿರ್ಲಾ, ಕಾರ್ಯ ನಿರ್ವಹಣಾಧಿಕಾರಿ ಸ್ಥಾನದಿಂದ ಕೆಳಗಿಳಿಯುವುದಾಗಿ ಸಲ್ಲಿಸಿದ್ದ ಅರ್ಜಿ ಕೋರಿ ಮನವಿಯನ್ನು ವೊಡಾಫೋನ್ ಐಡಿಯಾದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಅಂಗೀಕರಿಸಿದೆ.

ಈ ಹಿನ್ನೆಲೆಯಲ್ಲಿ ನಾನ್-ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿರುವ ಹಿಮಾಂಶು ಕಪಾನಿಯಾ ಅವರನ್ನು ಅವಿರೋಧ ವಾಗಿ ಆಯ್ಕೆ ಮಾಡಿದೆ. ಕಪಾನಿಯಾ ಕಳೆದ 25 ವರ್ಷಗಳ ಕಾಲ ಟೆಲಿಕಾಂ ಉದ್ಯಮದಲ್ಲಿ ಅನುಭವ ಹೊಂದಿದ್ದು, ಕೆಲವು ಟೆಲಿಕಾಂ ಕಂಪನಿಗಳಲ್ಲಿ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದ್ದಾರೆ.

ಇನ್ನು ಎರಡು ವರ್ಷಗಳ ಕಾಲ ಗ್ಲೋಬಲ್ ಜಿಎಸ್‌ ಎಮ್‌ ಎ ಬೋರ್ಡ್‌ ನಲ್ಲಿ ಸೇವೆ ಸಲ್ಲಿಸಿದ್ದಾರೆ.