Sunday, 15th December 2024

ನಾಲ್ವರು ಭಯೋತ್ಪಾದಕರ ಹತ್ಯೆ

ಕುಪ್ವಾರಾ: ಜಮ್ಮು-ಕಾಶ್ಮೀರ ಕುಪ್ವಾರಾ ಜಿಲ್ಲೆಯಲ್ಲಿ ಭಾರತೀಯ ಸೇನೆ ಯೋಧರು ಮತ್ತೊಂದು ಭರ್ಜರಿ ಬೇಟೆಯಾಡಿದ್ದಾರೆ.

ಪಾಕ್​ ಆಕ್ರಮಿತ ಕಾಶ್ಮೀರದಿಂದ ಭಾರತಕ್ಕೆ ನುಸುಳಲು ಪ್ರಯತ್ನ ಪಟ್ಟ ನಾಲ್ವರು ಭಯೋ ತ್ಪಾದಕರನ್ನು ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಹೊಡೆದುರುಳಿಸಿದ್ದಾರೆ. ಈ ಮೂಲಕ ವಾರದಲ್ಲಿ ಎರಡನೇ ಬಾರಿ ಉಗ್ರರ ಒಳನುಸುಳುವಿಕೆಯನ್ನು ತಡೆದಿದ್ದಾರೆ.

ಕುಪ್ವಾರಾದ ಮಚ್ಚಲ್ ವಲಯದಲ್ಲಿರುವ ಗಡಿ ನಿಯಂತ್ರಣ ರೇಖೆ ಬಳಿ ಉಗ್ರರು ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತದ ಭಾಗಕ್ಕೆ ಬರಲು ಯತ್ನಿಸುತ್ತಿದ್ದರು. ಇದೇ ವೇಳೆ ಭಾರತೀಯ ರಕ್ಷಣಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ.

ಕಳೆದ ವಾರವೂ ಕೂಡ ಕುಪ್ವಾರಾ ಜಿಲ್ಲೆಯಲ್ಲಿಯೇ ಎನ್​ಕೌಂಟರ್​ ನಡೆದಿತ್ತು. ಅಲ್ಲಿನ ಗಡಿ ನಿಯಂತ್ರಣ ರೇಖೆ ಬಳಿಯೇ ಇರುವ ಜುಮಗುಂಡ್ ಎಂಬಲ್ಲಿ ಐವರು ಭಯೋತ್ಪಾದಕರನ್ನು ಭದ್ರತಾ ಪಡೆ ಸಿಬ್ಬಂದಿ ಕೊಂದಿದ್ದರು.

ಮೃತ ಉಗ್ರರಿಂದ ಎಕೆ 47, 48 ಮದ್ದುಗುಂಡುಗಳು, 4 ಹ್ಯಾಂಡ್ ಗ್ರೆನೇಡ್​ಗಳು, 1 ಪೌಚ್​, ಸಿಗರೇಟ್​ ಪ್ಯಾಕೆಟ್​ಗಳು, ತಿಂಡಿಗಳನ್ನು ಅವರು ವಶಪಡಿಸಿಕೊಂಡಿದ್ದರು.