Sunday, 8th September 2024

ಬುಲ್ಡೋಜರ್ ವಾಹನದ ಚಕ್ರ ಸ್ಫೋಟ: ಕಾರ್ಮಿಕರ ಸಾವು

ರಾಯಪುರ: ಛತ್ತೀಸ್ ಗಢದ ರಾಯಪುರ ಜಿಲ್ಲೆಯಲ್ಲಿ ಬುಲ್ಡೋಜರ್ ವಾಹನದ ಚಕ್ರಕ್ಕೆ ಗಾಳಿ ಹಾಕುವ ಸಂದರ್ಭ ಚಕ್ರ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ರಾಯಪುರದ ಸಿಲ್ಟಾರ ಕೈಗಾರಿಕಾ ಪ್ರದೇಶದ ವರ್ಕ್ ಶಾಪ್ ವೊಂದರಲ್ಲಿ ಮೇ 3 ರಂದು ಘಟನೆ ನಡೆದಿದೆ. ಬುಲ್ಡೋಜರ್ ನ ಬೃಹತ್ ಗಾತ್ರದ ಟೈರ್ ಗೆ ಕಾರ್ಮಿಕನೊಬ್ಬ ಗಾಳಿ ತುಂಬಿಸುತ್ತಿದ್ದು, ಮತ್ತೋರ್ವ ವ್ಯಕ್ತಿ ಗಾಳಿ ತುಂಬುತ್ತಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಟೈರ್ ಅನ್ನು ಹಲವು ಬಾರಿ ಒತ್ತಿದ್ದಾನೆ. ಇದರಿಂದ ಟೈರ್ ಸ್ಫೋಟಗೊಂಡಿರುವುದು ಕ್ಯಾಮೆರಾ ದಲ್ಲಿ ಸೆರೆಯಾಗಿದೆ.

ಶಕ್ತಿಶಾಲಿಯಾಗಿ ಸ್ಫೋಟಗೊಂಡ ಪರಿಣಾಮ ಇಬ್ಬರೂ ವ್ಯಕ್ತಿಗಳ ದೇಹಗಳು ಸುಮಾರು ದೂರದವರೆಗೆ ಹಾರುತ್ತಿರುವು ದನ್ನು ವಿಡಿಯೋದಲ್ಲಿ ನೋಡ ಬಹುದಾಗಿದೆ. ಈ ಇಬ್ಬರು ಕಾರ್ಮಿಕರು ಮಧ್ಯಪ್ರದೇಶದ ರೇವಾ ಜಿಲ್ಲೆಯ ನಿವಾಸಿ ಗಳಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!