Sunday, 15th December 2024

ಉತ್ತರ ಲಡಾಕ್‌ನಲ್ಲಿ 4.7 ತೀವ್ರತೆಯ ಭೂಕಂಪ

ಡಾಕ್: ಕಾರ್ಗಿಲ್‌ನ ಉತ್ತರ ಲಡಾಕ್‌ನಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪದ ಕೇಂದ್ರವು ಕಾರ್ಗಿಲ್‌ನ ಉತ್ತರಕ್ಕೆ 401 ಕಿಮೀ ಮತ್ತು 150 ಕಿಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು.

ಈ ಹಿಂದೆ ಜೂನ್ 18ರಂದು 24 ಗಂಟೆಗಳಲ್ಲಿ ಮೂರು ಭೂಕಂಪಗಳು ಲಡಾಕ್‌ನಲ್ಲಿ ಸಂಭವಿಸಿದ್ದವು. ಲಡಾಖ್‌ನ ಲೇಹ್ ಜಿಲ್ಲೆಯ ಈಶಾನ್ಯಕ್ಕೆ 279 ಕಿಲೋಮೀಟರ್ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಬೆಳಗ್ಗೆ 8.28ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿತ್ತು. ಅದಕ್ಕೂ ಮೊದಲು, 4.1 ರ ತೀವ್ರತೆಯ ಭೂಕಂಪವು ಲಡಾಕ್‌ನ ಲೇಹ್ ಜಿಲ್ಲೆಯ ಈಶಾನ್ಯಕ್ಕೆ 295 ಕಿಲೋಮೀಟರ್‌ ದೂರದಲ್ಲಿ ಸಂಭವಿಸಿತ್ತು.