ನವದೆಹಲಿ: ಕೋರ್ಟ್‌ಗಳಲ್ಲಿ ಕಣ್ಣಿಗೆ ಪಟ್ಟಿಕಟ್ಟಿದ ನ್ಯಾಯದೇವತೆ ಪ್ರತಿಮೆ(Lady of Justice)ಯನ್ನು ಬಹುತೇಕರು ಕಂಡಿರುತ್ತಾರೆ. ನ್ಯಾಯಾಲಯಕ್ಕೆ ಬರುವ ಯಾರೇ ಆಗಿರಲಿ ಯಾವುದೇ ಬೇಧವಿಲ್ಲದೇ ನೋಡುವ ಸಂಕೇತವಾಗಿ ನ್ಯಾಯದೇವತೆ ಕಣ್ಣಿಗೆ ಪಟ್ಟಿ ಕಟ್ಟಲಾಗಿರುತ್ತದೆ. ಆದರೆ ಇನ್ನು ಮುಂದೆ ನ್ಯಾಯದೇವತೆ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟುವಂತಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್(Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್(DY Chandrachud) ಹೊಸ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಭಾರತದ ಯಾವುದೇ ನ್ಯಾಯಾಲಯಗಳಲ್ಲಿ ಕಣ್ಣಿಮಗೆ ಕಪ್ಪು ಪಟ್ಟಿ ಕಟ್ಟಿರುವ ನ್ಯಾಯ ದೇವತೆ ಮೂರ್ತಿ ಕಾಣಲು ಸಿಗುವುದಿಲ್ಲ.
ಇಲ್ಲಿವರೆಗೆ ಇದ್ದ ನ್ಯಾಯದೇವತೆ ಮೂರ್ತಿಯ ಕಣ್ಣಿಗೆ ಪಟ್ಟಿ ಕಟ್ಟಲಾಗಿತ್ತು. ಒಂದು ಕೈಯಲ್ಲಿ ತಕ್ಕಡಿ ಮತ್ತೊಂದು ಕೈಯಲ್ಲಿ ಖತ್ತಿ ಹಿಡಿದ ಪ್ರತಿಮೆ ಪ್ರತಿ ಕೋರ್ಟ್‌ನಲ್ಲಿರುತ್ತಿದ್ದವು. ಇದೀಗ ಸಿಜೆಐ ಚಂದ್ರಚೂಡ್ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಹೊಸ ನ್ಯಾಯದೇವತೆಯ ಮೂರ್ತಿ ಅನಾವರಣ ಮಾಡಿದ್ದಾರೆ. ಇಂತಹದ್ದೇ ಮೂರ್ತಿಯನ್ನು ಪ್ರತಿ ಕೋರ್ಟ್‌ನಲ್ಲಿ ಪ್ರತಿಷ್ಠಾಪಿಸುವಂತೆ ಸೂಚನೆ ನೀಡಿದ್ದಾರೆ.
ಹೊಸ ಮೂರ್ತಿ ವಿಶೇಷತೆ ಏನು?
ಹೊಸ ಮೂರ್ತಿಯ ವಿಶೇಷತೆ ಏನೆಂಬುದನ್ನು ನೋಡೋದಾದರೆ, ನ್ಯಾಯದೇವತೆ ಹೊಸಮೂರ್ತಿಯ ಕಣ್ಣಿಗೆ ಬಟ್ಟೆ ಕಟ್ಟಿರುವುದಿಲ್ಲ. ಅದು ಮಾತ್ರವಲ್ಲ, ನ್ಯಾಯದೇವತೆಯ ಕೈಯಲ್ಲಿ ಖಡ್ಗದ ಬದಲು ಭಾರತದ ಸಂವಿಧಾನ ನೀಡಲು ಕೂಡ ಸಿಜೆಐ ಹೇಳಿದ್ದಾರೆ. ಸಿಜೆಐ ಆದೇಶದಂತೆ ಈಗಾಗಲೇ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಹೊಸ ನ್ಯಾಯದೇವತೆಯ ಮೂರ್ತಿ ಅನಾವರಣ ಮಾಡಲಾಗಿದೆ.
New Delhi: CJI Chandrachud Orders Changes to Supreme Court's Justice Statue
— IANS (@ians_india) October 16, 2024
Chief Justice of India, D.Y. Chandrachud, has directed changes to the statue of the Goddess of Justice at the Supreme Court. The statue’s traditional blindfold has been removed, symbolizing transparent… pic.twitter.com/XBePehNg7k
ನ್ಯಾಯದೇವತೆಯ ಇತಿಹಾಸ ಏನು?
ಸದ್ಯ ನಮ್ಮ ದೇಶದಲ್ಲಿ ಕಾಣುವ ನ್ಯಾಯದೇವತೆಯ ಮೂರ್ತಿ ಮೂಲತಃ ರೋಮ್ ಸಾಮ್ರಾಜ್ಯದ ಕಲ್ಪನೆ. ಇದು ಮೊದಲ ಬಾರಿ ಕಂಡು ಬಂದಿದ್ದು ರೋಮ್ನ ಆಗಸ್ಟಸ್ ಸಾಮ್ರಾಜ್ಯದಲ್ಲಿ ನ್ಯಾಯದೇವತೆ ಅಂದ್ರೆ ಲೇಡಿ ಆಫ್ ಜಸ್ಟಿಸ್ ರೋಮನ್ ಪುರಾಣಗಳಲ್ಲಿ ಬರುವ ಜಸ್ಟಿಟಿಯಾ ಎಂಬ ದೇವತೆ. ಅವಳು ನ್ಯಾಯಕ್ಕೆ ಅಧಿಪತಿ 16ನೇ ಶತಮಾನದಲ್ಲಿ ಮೊದಲ ಬಾರಿ ಈ ನ್ಯಾಯದೇವತೆಯ ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಯ್ತು. ಯಾರಿಗೂ ಕೂಡ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ, ನ್ಯಾಯದೇವತೆಯೂ ಕೂಡ ಬಂದ ಆರೋಪಿಗಳಲ್ಲಿ ಬೇಧ ಭಾವ ಎಣಿಸದಿರಲಿ ಎಂಬ ಉದ್ದೇಶದಿಂದ ನ್ಯಾಯದೇವತೆಯ ಕಣ್ಣಿಗೆ ಪಟ್ಟಿಕಟ್ಟಲಾಯ್ತು.
16ನೇ ಶತಮಾನದಿಂದಲೂ ನ್ಯಾಯದೇವತೆ ಇದೇ ರೀತಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು ಹಾಗೂ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡ ರೂಪದಲ್ಲಿಯೇ ಇದ್ದಾಳೆ. ವಿಶ್ವದ ಅನೇಕ ರಾಷ್ಟ್ರಗಳ ಕೋರ್ಟ್‌ನಲ್ಲಿ ಇದೇ ನ್ಯಾಯದೇವತೆಯನ್ನು ಕೋರ್ಟ್‌ನಲ್ಲಿ ಇಡಲಾಗಿದೆ. ಮೊಟ್ಟ ಮೊದಲ ಬಾರಿ ಈ ನ್ಯಾಯದೇವತೆಯ ಎದುರು ಕೋರ್ಟ್ ವಿಚಾರಣೆ ನಡೆಸಿದ ನ್ಯಾಯಮೂರ್ತಿಳು ಹನ್ಸ್ ಗೈಂಗ್,1543ರಲ್ಲಿ ಬರ್ನ್ನಲ್ಲಿ ಈ ನ್ಯಾಯದೇವತೆಯ ಎದುರು ಮೊದಲ ವಿಚಾರಣೆ ನಡೆಸಲಾಗಿತ್ತು. ಆಗ ಬರ್ನ್ ರೋಮನ್ ಸಾಮ್ರಾಜ್ಯದ ಒಂದು ಭಾಗವಾಗಿತ್ತು.
ಮೂಲಗಳ ಪ್ರಕಾರ, ಸಿಜೆಐ ಚಂದ್ರಚೂಡ್ ವಸಾಹತುಶಾಹಿ ಪರಂಪರೆಯನ್ನು ಮೀರಿ ಮುನ್ನಡೆಯುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. “ಕಾನೂನು ಕುರುಡಲ್ಲ; ಅದು ಎಲ್ಲರನ್ನು ಸಮಾನವಾಗಿ ನೋಡುತ್ತದೆ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: CJI Chandrachud: ನ.10ರಂದು ನಿವೃತ್ತರಾಗಲಿರುವ ಸುಪ್ರೀಂ ಕೋರ್ಟ್ ಸಿಜೆಐ ಡಿ.ವೈ. ಚಂದ್ರಚೂಡ್ ಹಿನ್ನೆಲೆ ಹೀಗಿದೆ