Saturday, 12th October 2024

‘ಲಖಿಂಪುರ್ ಫೈಲ್ಸ್’ ಚಿತ್ರ ಮಾಡಿ: ಅಖಿಲೇಶ್ ಯಾದವ್

ಲಖನೌ: ಕಾಶ್ಮೀರ್‌ ಫೈಲ್ಸ್ ಆಯ್ತು, ‘ಲಖಿಂಪುರ್ ಫೈಲ್ಸ್’ ಮಾಡಿ, ಈ ಹಿಂಸಾಚಾರದ ಬಗ್ಗೆಯೂ ಜನರಿಗೆ ತಿಳಿಯಲಿ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

ಕಳೆದ ಅಕ್ಟೋಬರ್ʼನಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿಯೇ ರೈತರ ಮೇಲೆ ಕಾರು ಹತ್ತಿಸಿದ್ದು, ನಾಲ್ವರು ರೈತರು ಸಾಯಿಸಿದರು ಎಂದರು.

ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ವಿಜಯವಲ್ಲದಿದ್ದರೂ ತಮ್ಮ ಪಕ್ಷ ‘ನೈತಿಕ ವಿಜಯ’ ದಾಖಲಿಸಿದೆ. ಇನ್ನು ‘ಕಾಶ್ಮೀರ್‌ ಫೈಲ್ಸ್ ಮಾಡಲು ಸಾಧ್ಯವಾದರೆ ಲಖಿಂಪುರ್ ಫೈಲ್ಸ್ ಕೂಡ ಮಾಡಬಹುದು. ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆಯೂ ಜನರು ತಿಳಿದುಕೊಳ್ಳಬೇಕು’ ಎಂದು ಹೇಳಿದರು.