Friday, 22nd November 2024

ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಲಾಲು ಹಾಜರು

ಪಟ್ನಾ : ಮೇವು ಹಗರಣಕ್ಕೆ ಸಂಬಂಧಿಸಿ, ರಾಷ್ಟ್ರೀಯ ಜನತಾದಳದ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್ ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾ ದರು.

ಕಳೆದ ವಾರ ಆದೇಶ ನೀಡಿದ್ದ ನ್ಯಾಯಾಧೀಶ ಪ್ರಜೇಶ್‌ ಕುಮಾರ್ ಅವರು, ಲಾಲು ಅವರು ನ್ಯಾಯಾಲಯಕ್ಕೆ ಹಾಜರಾಗ ಬೇಕೆಂದು ಮುಂದಿನ ವಿಚಾರಣೆಯನ್ನು ಇದೇ 30ಕ್ಕೆ ನಿಗದಿ ಪಡಿಸಿದರು.

ವಿಚಾರಣೆಯಲ್ಲಿ ನ್ಯಾಯಾಲಯವು ಸುಮಾರು 200 ಸಾಕ್ಷಿಗಳ ವಿಚಾರಣೆ ನಡೆಸಲಿದೆ. ನ್ಯಾಯಾಲಯ ಹೇಳಿದಾಗ ಅವರು ಹಾಜರಾಗುತ್ತದೆ ಎಂದು ಲಾಲು ಪ್ರಸಾದ್‌ ಅವರ ಪರ ವಕೀಲ ಸುಧೀರ್‌ ಸಿನ್ಹಾ ತಿಳಿಸಿದರು.

ಬಂಕಾ ಜಿಲ್ಲೆಯ ಖಜಾನೆಯಿಂದ ಸುಮಾರು ₹ 1 ಕೋಟಿ ಹಣವನ್ನು ಅಕ್ರಮವಾಗಿ ಪಡೆದ ಆರೋಪದ ಮೇಲೆ ಲಾಲು ಅವರಿಗೆ ಸಮನ್ಸ್‌ ನೀಡಲಾಗಿತ್ತು.

ಸದ್ಯ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು ದೆಹಲಿಯಲ್ಲಿ ಹಿರಿಯ ಪುತ್ರಿಯ ಮನೆಯಲ್ಲಿದ್ದಾರೆ.