ಭಿವಾನಿ ಜಿಲ್ಲೆಯ ದಡಮ್ ಗಣಿಗಾರಿಕೆ ಪ್ರದೇಶದಲ್ಲಿ ದುರಂತ ಸಂಭವಿಸಿದ್ದು, ಗಣಿಗಾರಿಕೆ ವೇಳೆ ಭೂ ಕುಸಿತವಾಗಿ 10-15 ಮಂದಿ ಮೃತಪಟ್ಟ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಗಣಿಗಾರಿಕೆಗೆ ಬಳಸುತ್ತಿದ್ದ ವಾಹನಗಳು ಕೂಡ ಕುಸಿತವಾಗಿರುವ ಭೂಮಿಯ ಅವಶೇಷಗಳಡಿ ಹೂತು ಹೋಗಿವೆ ಎಂದು ಹೇಳಲಾಗುತ್ತಿದೆ. ಶನಿವಾರ ಬೆಳಗ್ಗೆ ಸುಮಾರಿಗೆ ಗಣಿಗಾರಿಕೆ ನಡೆಯುತ್ತಿದ್ದಾಗ ಭೂ ಕುಸಿತವಾಗಿದೆ ಎಂದು ತಿಳಿದುಬಂದಿದೆ.
ತೋಷಮ್ ಬ್ಲಾಕ್ನ ದಡಮ್ ಗಣಿಗಾರಿಕೆ ಪ್ರದೇಶದಲ್ಲಿ ಪರ್ವತದ ಹೆಚ್ಚಿನ ಭಾಗವು ಬಿರುಕು ಬಿಟ್ಟಿದ್ದರಿಂದ ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ಕೃಷಿ ಸಚಿವ ಜೆಪಿ ದಲಾಲ್ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಸ್ಥಳಕ್ಕೆ ತಲುಪಿದ್ದಾರೆ.