Friday, 22nd November 2024

ಭಾರೀ ಭೂಕುಸಿತ: ಹುನ್ಲಿ-ಅನಿನಿ ನಡುವಿನ ಹೆದ್ದಾರಿ ಕುಸಿತ

ವದೆಹಲಿ: ಅರುಣಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ಸಂಭವಿಸಿದ್ದು, ಚೀನಾದ ಗಡಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಒಂದು ಭಾಗ ಕೊಚ್ಚಿ ಹೋಗಿದೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಸತತ ಮಳೆಯಿಂದಾಗಿ ಈ ಘಟನೆ ನಡೆದಿದೆ.

ಹುನ್ಲಿ ಮತ್ತು ಅನಿನಿ ನಡುವಿನ ಹೆದ್ದಾರಿ ಕುಸಿತದಿಂದಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ರಸ್ತೆಯು ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ ಕಾರಣ ಶೀಘ್ರದಲ್ಲಿ ಮರುಸ್ಥಾಪಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ದಿಭಾಂಗ್ ಕಣಿವೆಯು ಭಾರತದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಮಾರ್ಗವಾಗಿದೆ.

ಮೂರು ದಿನಗಳಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡುತ್ತೇವೆ ಎಂದು ಜಿಲ್ಲಾಡಳಿತವು ದಿಭಾಂಗ್ ಕಣಿವೆಯ ನಿವಾಸಿಗಳಿಗೆ ನೋಟಿಸ್‌ ನೀಡಿದೆ. ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ರೋಯಿಂಗ್‌ಗೆ ಸಂಪರ್ಕಿಸುವ NH 313 ರ ಪ್ರಮುಖ ಭಾಗವು ಕೊಚ್ಚಿಹೋಗಿದೆ ಎಂದು ದಿಭಾಂಗ್ ಕಣಿವೆಯ ಎಲ್ಲಾ ನಿವಾಸಿಗಳಿಗೆ ತಿಳಿಸಲಾಗಿದೆ.

ಇದನ್ನು ಸರಿಪಡಿಸಲು ಕನಿಷ್ಟ ಮೂರು ದಿನಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.