ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಿವಾಸದ ಹೊರಗೆ ಸಂಭವಿಸಿದ ಗುಂಡಿನ ದಾಳಿ ಪ್ರಕರಣದ ಸಂಬಂಧ ಲಾರೆನ್ಸ್ ಬಿಷ್ಣೋಯಿ ಗುಂಪಿನ ಮತ್ತೊಬ್ಬ ಸದಸ್ಯನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಹರ್ಯಾಣದ ಫತೇಹಾಬಾದ್ ನಿವಾಸಿ ಹರ್ಪಾಲ್ ಸಿಂಗ್ (34) ಎಂದು ಗುರುತಿಸಲಾಗಿದ್ದು, ಆತನನ್ನು ಆತನ ತವರು ಗ್ರಾಮದ ನಿವಾಸದಿಂದ ಮುಂಬೈ ಅಪರಾಧ ದಳದ ತಂಡ ಬಂಧಿಸಿದೆ ಎಂದು ಹೇಳಿದ್ದಾರೆ.
ಆರೋಪಿ ಹರ್ಪಾಲ್ ಸಿಂಗ್ ನನ್ನು ಮಂಗಳವಾರ ಬೆಳಗ್ಗೆ ಮುಂಬೈಗೆ ಕರೆ ತರಲಾಗಿದ್ದು, ಮಧ್ಯಾಹ್ನದ ನಂತರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಈವರೆಗೆ ನಡೆದಿರುವ ಆರನೆಯ ಬಂಧನ ಇದಾಗಿದೆ.
ಏಪ್ರಿಲ್ 14ರಂದು ಮೋಟರ್ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಸಲ್ಮಾನ್ ಖಾನ್ ನಿವಾಸವಾದ ಗೆಲಾಕ್ಸಿ ಅಪಾರ್ಟ್ ಮೆಂಟ್ ಹೊರಗೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದರು.