Saturday, 21st September 2024

ಕಾಸರಗೋಡು ಜಿ.ಪಂ ಚುನಾವಣೆ: ಎಲ್’ಡಿ.ಎಫ್ ಪಟ್ಟಿ ಅಂತಿಮ

ಕಾಸರಗೋಡು : ಜಿಲ್ಲಾ ಪಂಚಾಯತ್’ಗೆ ಡಿ.14ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ ಡಿ ಎಫ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ.

ಸಿಪಿಐಎಂ ಹತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಸಿಪಿಐ 3, ಕೇರಳ ಕಾಂಗ್ರೆಸ್ ಎಂ, ಎಲ್ ಜೆ ಡಿ, ಐ ಎನ್ ಎಲ್ ಗೆ ತಲಾ ಒಂದು ಸ್ಥಾನ ನೀಡಲಾಗಿದೆ. ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಚೆರ್ವತ್ತೂರು ಸಿ. ಜಿ ಸಜಿತ್ , ಮಡಿಕೈ ಬೇಬಿ ಬಾಲಕೃಷ್ಣನ್ , ಪೆರಿಯ ಫಾತಿಮತ್ , ಶಂನಾ , ದೇಲಂಪಾಡಿ ಎ . ಪಿ ಕುಶಲ , ಕರಿಂದಲ ಕೆ. ಶಕುಂತಲಾ, ಕುಂಬಳೆ ಕೆ . ಶಾಲಿನಿ , ಮಂಜೇಶ್ವರ ಅಬೂಬಕ್ಕರ್ ಸಾದಿಕ್ , ಪುತ್ತಿಗೆ ಬಿ . ವಿಜಯಕುಮಾರ್ , ಬೇಡಡ್ಕ ಎಸ್ .ಎನ್ ಸರಿತ್, ವರ್ಕಾಡಿ ಪುಷ್ಪಾ ಜಯರಾಂ , ಎಡನೀರು ಸಿ . ಜಾನು , ಉದುಮ ಜಮೀಲಾ ಟೀಚರ್ , ಕಳ್ಳಾರ್ ಸಿನೋಜ್ , ಚಿತ್ತಾರಿಕಾಲ್ ಪಿ . ವೇಣುಗೋಪಾಲ್ , ಪಿಲಿಕ್ಕೋಡ್ ಎಂ . ಮಧು ಕಣಕ್ಕಿಲಿಯಲಿರುವರು.