Saturday, 14th December 2024

ಲಕ್ಷಕ್ಕಿಂತ ಕಡಿಮೆಯಾದ ಕರೋನಾ ಸೋಂಕು

#corona

ನವದೆಹಲಿ: ಭಾರತದಲ್ಲಿ ಕರೋನಾ ವೈರಸ್‌ ಸೋಂಕು ದೃಢಪಟ್ಟ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕಿಂತ ಕಡಿಮೆಯಾಗಿದೆ. ಕಳೆದ 24 ಗಂಟೆಗಳ ಅಂತರದಲ್ಲಿ ಕೋವಿಡ್ ದೃಢಪಟ್ಟ 83,876 ಹೊಸ ಪ್ರಕರಣಗಳು ದಾಖಲಾಗಿವೆ.

ಇದೇ ಅವಧಿಯಲ್ಲಿ 1,99,054 ಮಂದಿ ಗುಣಮುಖರಾಗಿದ್ದಾರೆ. 895 ಮಂದಿ ಕೋವಿಡ್‌ ಸಂಬಂಧಿತ ಕಾರಣಗಳಿಂದ ಮೃತಪಟ್ಟಿದ್ದು, ಈವರೆಗೂ 5,02,874 ಮಂದಿ ಮೃತಪಟ್ಟಿದ್ದಾರೆ. ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 4.22 ಕೋಟಿ ದಾಟಿದೆ.

ದೇಶದಲ್ಲಿ ಪ್ರಸ್ತುತ 11,08,938 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್‌ ದೃಢ ಪ್ರಮಾಣ ಶೇಕಡ 7.25ಕ್ಕೆ ಇಳಿಕೆಯಾಗಿದೆ ಹಾಗೂ ಚೇತರಿಕೆ ಪ್ರಮಾಣ ಶೇಕಡ 96.19ರಷ್ಟಿದೆ. ದೇಶದಾದ್ಯಂತ ಒಟ್ಟು 169.63 ಕೋಟಿಗೂ ಅಧಿಕ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ.