Wednesday, 18th December 2024

LIC Policy: LIC ಪಾಲಿಸಿಗಳಲ್ಲಿ 900 ಕೋಟಿ ರೂ.ಗೆ ದಿಕ್ಕಿಲ್ಲ… ನಿಮ್ಮದೂ ಇರಬಹುದು! ಹೀಗೆ ಚೆಕ್‌ ಮಾಡಿ

LIC Policy

ನವದೆಹಲಿ: ಭಾರತೀಯ ಜೀವ ವಿಮೆ ನಿಗಮ ಅಥವಾ ಎಲ್‌ಐಸಿ(LIC Policy)ಯಲ್ಲಿ 2023-24ರಲ್ಲಿ 900 ಕೋಟಿ ರೂ. ಹಣವನ್ನು ಯಾರೊಬ್ಬರೂ ಕ್ಲೇಮ್‌ ಮಾಡಿಲ್ಲ. 3 ಲಕ್ಷದ 70 ಸಾವಿರಕ್ಕೂ ಹೆಚ್ಚು ಮಂದಿ ಪಾಲಿಸಿದಾರರು ಅವರ ಪಾಲಿಸಿಗಳು ಮೆಚ್ಯೂರ್‌ ಆಗಿದ್ದರೂ, ಹಣವನ್ನು ಪಡೆದಿಲ್ಲ. ಹೀಗಾಗಿ ವಾರಸುದಾರರಿಲ್ಲದೆ ಎಲ್‌ಐಸಿಯಲ್ಲಿಯೇ ಅದು ಬಾಕಿಯಾಗಿದೆ. ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್‌ ಚೌಧುರಿ ಲೋಕಸಭೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಹಾಗಾದ್ರೆ ಒಂದು ವೇಳೆ ನಿಮ್ಮ ಎಲ್‌ಐಸಿ ಪಾಲಿಯೂ ಇದರಲ್ಲಿ ಸೇರಿಕೊಂಡಿದ್ದರೆ ನೀವು ಹೇಗೆ ಮೆಚ್ಯೂರಿಟಿ ಬೆನಿಫಿಟ್‌, ಅಂದ್ರೆ ದುಡ್ಡು ಪಡೆಯಬಹುದು ಎಂಬುದನ್ನು ಈಗ ತಿಳಿದುಕೊಳ್ಳೋಣ. ಎಲ್‌ಐಸಿಯಲ್ಲಿ ಅನ್‌ಕ್ಲೇಮ್ಡ್‌ ಅಮೌಂಟ್‌ ಅನ್ನು ಪರಿಶೀಲಿಸಲು ನಾಲ್ಕು ಸಂಗತಿಗಳು ಬೇಕು. ಎಲ್‌ಐಸಿ ಪಾಲಿಸಿಯ ಸಂಖ್ಯೆ. ಪಾಲಿಸಿದಾರರ ಹೆಸರು, ಜನ್ಮ ದಿನಾಂಕ ಮತ್ತು ಪ್ಯಾನ್‌ ಕಾರ್ಡ್ ಅಗತ್ಯ.

    ಈಗ ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಅನ್‌ ಕ್ಲೇಮ್‌ ಅಮೌಂಟ್‌ ಅನ್ನು ತಿಳಿಯೋದು ಹೇಗೆ ಎಂದು ನೋಡೋಣ.

    • ಮೊದಲ ಸ್ಟೆಪ್‌ ಆಗಿ ಎಲ್‌ಐಸಿ ವೆಬ್‌ಸೈಟ್‌ಗೆ ಲಾಗಿನ್‌ ಆಗಿ. (https://licindia.in/home)
    • ಎರಡನೇ ಸ್ಟೆಪ್‌ನಲ್ಲಿ ಕಸ್ಟಮರ್‌ ಸರ್ವೀಸ್‌ ಕೆಟಗರಿಯಲ್ಲಿ – Unclaimed Amounts of policy Holders ಸೆಕ್ಷನ್‌ ಅನ್ನು ಕ್ಲಿಕ್ಕಿಸಿ.
    • ಮೂರನೇ ಸ್ಟೆಪ್‌ನಲ್ಲಿ ಪಾಲಿಸಿ ಸಂಖ್ಯೆ, ಹೆಸರು, ಜನ್ಮ ದಿನಾಂಕ, ಪ್ಯಾನ್‌ ಕಾರ್ಡ್‌ ವಿವರ ಸಲ್ಲಿಸಿ.
    • ನಾಲ್ಕನೇ ಸ್ಟೆಪ್‌ನಲ್ಲಿ “Submit’ ಮೇಲೆ ಕ್ಲಿಕ್ಕಿಸಿ. ಹಾಗೂ ವಿವರಗಳನ್ನು ಪಡೆಯಿರಿ.

    ಹಾಗಾದರೆ ಅನ್‌ಕ್ಲೇಮ್ಡ್‌ ಅಕೌಂಟ್‌ಗಳಿಗೆ ಸಂಬಂಧಿಸಿದ ನಿಯಮಗಳೇನು? ಎಂಬುದನ್ನು ನೋಡೋಣ.

    • ಪಾಲಿಸಿಯ ಸೆಟ್ಲ್‌ಮೆಂಟ್‌ ದಿನ ಮುಕ್ತಾಯವಾದ 6 ತಿಂಗಳ ಬಳಿಕವೂ ನೀವು ಕ್ಲಿಯರ್‌ ಮಾಡದಿದ್ದರೆ, ಬಾಕಿ ಮೊತ್ತವು ಅನ್‌ಕ್ಲೇಮ್ಡ್‌ ಅಮೌಂಟ್‌ ಎಂದು ಪರಿಗಣನೆಯಾಗುತ್ತದೆ.
    • ನೀವು 10 ವರ್ಷಗಳಿಗೂ ಹೆಚ್ಚು ಅವಧಿಯಿಂದ ಮೆಚ್ಯೂರ್‌ ಆಗಿರುವ ಪಾಲಿಸಿ ಹಣವನ್ನು ತೆಗೆದುಕೊಳ್ಳದಿದ್ದರೆ, ಆ ಹಣವನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸುತ್ತಾರೆ.

    ಎಲ್‌ಐಸಿಯ ಪರ್‌ಫಾರ್ಮೆನ್ಸ್‌ ಬಗ್ಗೆ ನೋಡೋದಾದರೆ ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಎಲ್‌ಐಸಿಯ ನಿವ್ವಳ ಲಾಭದಲ್ಲಿ 4% ಇಳಿಕೆಯಾಗಿದೆ. 7,621 ಕೋಟಿ ರೂ.ಗೆ ತಗ್ಗಿದೆ. ಹೀಗಿದ್ದರೂ, ಎಲ್‌ಐಸಿಯ ನಿವ್ವಳ ಪ್ರೀಮಿಯಂ ಆದಾಯದಲ್ಲಿ 11% ಏರಿಕೆಯಾಗಿದೆ. ಹೀಗಿದ್ದರೂ, ತಜ್ಞರ ಪ್ರಕಾರ ಎಲ್‌ಐಸಿ ಷೇರಿನ ಟೆಕ್ನಿಕಲ್‌ ಮತ್ತು ಫಂಡಮೆಂಟಲ್‌ ಅಂಶಗಳು ಚೆನ್ನಾಗಿದ್ದು, ಖರೀದಿಸಬಹುದು ಎನ್ನುತ್ತಿದ್ದಾರೆ. ಮೋತಿಲಾಲ್‌ ಓಸ್ವಾಲ್‌ ಫೈನಾನ್ಷಿಯಲ್‌ ಸರ್ವೀಸ್‌ ಬ್ರೋಕರೇಜ್‌ ಸಂಸ್ಥೆಯು ಎಲ್‌ಐಸಿ ಷೇರುಗಳನ್ನು ಖರೀದಿಸಬಹುದು ಎಂದು ಶಿಫಾರಸು ನೀಡಿದೆ.

    ಈ ಸುದ್ದಿಯನ್ನೂ ಓದಿ: Insurance Claim: ಯಾವ ಕಾರಣಗಳಿಂದ ಮೃತಪಟ್ಟರೆ ವಿಮೆ ಹಣ ಸಿಗುವುದಿಲ್ಲ? ಅನುಮಾನಗಳಿಗೆ ಇಲ್ಲಿದೆ ಪರಿಹಾರ