Sunday, 15th December 2024

ಎಲ್‌ಐಸಿ ಸಂಸ್ಥೆಯ ಎಂ.ಡಿ ಗಳಾಗಿ ತಬ್ಲೇಷ್ ಪಾಂಡೆ, ಎಂ ಜಗನ್ನಾಥ್‌ ನೇಮಕ

ನವದೆಹಲಿ: ತಬ್ಲೇಷ್ ಪಾಂಡೆ, ಎಂ ಜಗನ್ನಾಥ್‌ರನ್ನು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್‌ಗಳಾಗಿ ನೇಮಕ ಮಾಡಲಾಗಿದೆ. ಎಲ್‌ಐಸಿಯ ಎಂಡಿಗಳಾಗಿದ್ದ ರಾಜ್‌ ಕುಮಾರ್ ಮತ್ತು ಬಿಸಿ ಪಟ್ನಾಯಕ್ ನಿವೃತ್ತಿ ಹೊಂದಿದ್ದಾರೆ.

ಎಂ ಜಗನ್ನಾಥ್‌ ಹಲವಾರು ವರ್ಷಗಳಿಂದ ಎಲ್‌ಐಸಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇನ್ನು ಎಂಡಿಯಾಗಿ ನೇಮಕಗೊಳ್ಳುತ್ತಿರುವ ತಬ್ಲೇಷ್ ಪಾಂಡೆ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಿಸಿಕೊಳ್ಳಲಾಗಿದೆ.

1988ರಲ್ಲಿ ಡೈರೆಕ್ಟ್ ರಿಕ್ರೂಟ್ ಆಫೀಸರ್ (ಡಿಆರ್‌ಒ) ಆಗಿ ಎಂ ಜಗನ್ನಾಥ್ ನೇಮಕಗೊಂಡಿದ್ದಾರೆ. ಮಾರುಕಟ್ಟೆ ಯಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿದ್ದಾರೆ. ಹಲವಾರು ಪ್ರಮುಖ ಯೋಜನೆಗಳನ್ನು, ಯಶಸ್ವಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ಸಫಲರಾಗಿದ್ದಾರೆ. ಹಾಗೆಯೇ ಎಂ ಜಗನ್ನಾಥ್ ಈ ಹಿಂದೆ ಎರ್ನಾಕುಲಂ, ಧಾರಾವಾಡ, ಬೆಂಗಳೂರಿನಲ್ಲಿ ಎಲ್‌ಐಸಿಯ ಸೀನಿಯರ್ ಡಿವಿಜಿನಲ್ ಮ್ಯಾನೇಜರ್ ಆಗಿದ್ದರು.

ಶ್ರೀಲಾಂಕದ ಕೊಲೊಂಬೊದಲ್ಲಿ 2009 ಮತ್ತು 2013ರ ನಾಲ್ಕು ವರ್ಷದ ಅವಧಿಯಲ್ಲಿ ಎಲ್‌ಐಸಿಯ ಸಿಇಒ ಮತ್ತು ಎಂಡಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕವನ್ನು ಒಳಗೊಂಡ ಸೌತ್ ಸೆಂಟ್ರಲ್ ಜೋನ್, ಹೈದಾರಾಬಾದ್‌ನಲ್ಲಿ ಜೋನಲ್ ಮ್ಯಾನೆಜರ್ ಆಗಿ ಕಾರ್ಯನಿರ್ವಹಣೆ ಮಾಡಿದ್ದಾರೆ.

ಸಿದ್ಧಾರ್ಥ ಮೊಹಂತಿ ಎಲ್‌ಐಸಿಯ ಮಧ್ಯಂತರ ಚೇರ್‌ಮನ್ ಆಗಿ ನೇಮಕಗೊಂಡಿದ್ದಾರೆ.