Thursday, 24th October 2024

Life Insurance Policy: ಎಲ್‌ಐಸಿ ಪಾಲಿಸಿದಾರರಿಗೆ ಗುಡ್‌ನ್ಯೂಸ್; ಸರೆಂಡರ್ ಮೌಲ್ಯ ಹೆಚ್ಚಳ

Life Insurance Policey

ಜೀವ ವಿಮಾ ಪಾಲಿಸಿ (Life Insurance Policy) ಹೊಂದಿರುವವರಿಗೆ ಒಂದು ಗುಡ್‌ನ್ಯೂಸ್. ಜೀವ ವಿಮಾ ಪಾಲಿಸಿಯಲ್ಲಿ ಅಕ್ಟೋಬರ್ 1ರಿಂದ ಒಂದು ಪ್ರಮುಖ ಬದಲಾವಣೆಯಾಗಿದೆ. ಇದರಿಂದ ಗ್ರಾಹಕರು ಇನ್ನು ಮುಂದೆ ಹೆಚ್ಚಿನ ಸರೆಂಡರ್ ಮೌಲ್ಯ (Surrender Value) ಪಡೆಯಲು ಸಾಧ್ಯವಿದೆ.

ಹೊಸ ವಿಶೇಷ ಸರೆಂಡರ್ ಮೌಲ್ಯದ (New special surrender value) ಮಾನದಂಡದ ಪ್ರಕಾರ, ಮೊದಲ ವರ್ಷದ ಅನಂತರ ಗ್ರಾಹಕರು ತಮ್ಮ ಜೀವ ವಿಮಾ ಪಾಲಿಸಿ ಮುಕ್ತಾಯಗೊಳಿಸಿದರೆ ಪಾಲಿಸಿದಾರರು ಹೆಚ್ಚಿನ ಮರುಪಾವತಿ ಪಡೆಯುತ್ತಾರೆ. ಕೇವಲ ಒಂದು ವಾರ್ಷಿಕ ಪ್ರೀಮಿಯಂ ಪಾವತಿಸಿದ್ದರೂ ಸಹ ಅವರು ಸರೆಂಡರ್ ಮೌಲ್ಯವನ್ನು ಪಡೆಯಲು ಸಾಧ್ಯವಿದೆ. ಈ ಹಿಂದೆ ಎರಡನೇ ವರ್ಷದಿಂದ ಮಾತ್ರ ಪಾಲಿಸಿದಾರರಿಗೆ ಈ ಸೌಲಭ್ಯ ಲಭ್ಯವಿತ್ತು. ಆದರೆ ಇದೀಗ ಇದು ಮೊದಲ ಒಂದು ವರ್ಷದ ಬಳಿಕ ಸಿಗಲಿದೆ.

ಹೊಸ ಗ್ಯಾರಂಟಿ ಸರೆಂಡರ್ ಮೌಲ್ಯ ನಿಯಮಗಳನ್ನು ಅನುಷ್ಠಾನಗೊಳಿಸುವುದರಿಂದ ಮೂರು ಪ್ರಯೋಜನಗಳಿವೆ. ಪಾಲಿಸಿದಾರರು ಸುಲಭವಾಗಿ ಪಾಲಿಸಿಯನ್ನು ಸರೆಂಡರ್ ಮಾಡಲು ಸಾಧ್ಯವಾಗುತ್ತದೆ, ಹೆಚ್ಚಿನ ಮರುಪಾವತಿಯನ್ನು ಪಡೆಯಬಹುದು ಮತ್ತು ಯೋಜನೆಯನ್ನು ಬದಲಾಯಿಸುವುದು ಸುಲಭವಾಗುತ್ತದೆ.

ಈ ಹೊಸ ನಿಯಮಗಳು ವಿಶೇಷವಾಗಿ ಸಾಂಪ್ರದಾಯಿಕ ಜೀವ ವಿಮಾ ಪಾಲಿಸಿಗಳ ಮೇಲೆ ಪರಿಣಾಮ ಬೀರುತ್ತದೆ. ಇವುಗಳಲ್ಲಿ ಬೋನಸ್ ಆಧಾರಿತ ಮತ್ತು ನಾನ್-ಪಾರ್ಟಿಸಿಪೇಟಿಂಗ್ ನೀತಿಗಳು ಸೇರಿವೆ. ಇದರಲ್ಲಿ ಸೇರಿರದ ಪಾಲಿಸಿದಾರರಿಗೆ ರಿಟರ್ನ್ಸ್‌ನಲ್ಲಿ ಶೇ. 0.3- 0.5ರಷ್ಟು ಕಡಿತ ಮಾಡಲಾಗುತ್ತದೆ.

Life Insurance Policy

ಉದಾಹರಣೆಗೆ ಪಾಲಿಸಿದಾರನು 10 ವರ್ಷಗಳ ಅವಧಿಯ 5,00,000 ರೂ. ವಿಮಾ ಪಾಲಿಸಿಯನ್ನು ಖರೀದಿಸಿದರೆ ಮೊದಲ ವರ್ಷದಲ್ಲಿ 50,000 ರೂ. ಪಾವತಿಸುತ್ತಾನೆ. ಹಳೆಯ ನಿಯಮಗಳ ಪ್ರಕಾರ ಪಾಲಿಸಿದಾರರು ಒಂದು ವರ್ಷದ ಅನಂತರ ಪಾಲಿಸಿಯಿಂದ ನಿರ್ಗಮಿಸಿದರೆ, ಅವರು ಯಾವುದೇ ಮರುಪಾವತಿಯನ್ನು ಪಡೆಯುವುದಿಲ್ಲ. ಆದರೆ ಹೊಸ ನಿಯಮಗಳ ಪ್ರಕಾರ, ಪಾಲಿಸಿದಾರನು ಒಂದು ವರ್ಷದ ಅನಂತರ ಪಾಲಿಸಿಯನ್ನು ತೊರೆದರೂ ಮರುಪಾವತಿಯನ್ನು ಪಡೆಯುತ್ತಾನೆ. ವಿಮಾ ಕಂಪನಿಯು ಇಡೀ ವರ್ಷಕ್ಕೆ ಪ್ರೀಮಿಯಂ ಪಡೆದಿದ್ದರೆ, ಪಾಲಿಸಿದಾರರಿಗೆ 31,295 ರೂ. ಹಿಂದಿರುಗಿಸಲಾಗುತ್ತದೆ.

ಈ ಕುರಿತು ಮಾಹಿತಿ ನೀಡಿರುವ ಸೆಬಿ (SEBI) ಹೂಡಿಕೆ ಸಲಹೆಗಾರರಾದ ಅಭಿಷೇಕ್ ಕುಮಾರ್, ಹಿಂದಿನ ನಿಯಮಗಳ ಪ್ರಕಾರ ನಾಲ್ಕರಿಂದ ಏಳು ವರ್ಷಗಳ ನಡುವೆ ಪಾಲಿಸಿ ಸರೆಂಡರ್ ಮಾಡಿದರೆ ಒಟ್ಟು ಪ್ರೀಮಿಯಂನ ಶೇ. 50ರಷ್ಟನ್ನು ಪಾವತಿಸಬೇಕು ಎಂದರು.

Small Savings Schemes : ಸಣ್ಣ ಉಳಿತಾಯದ ಬಡ್ಡಿ; ಸರ್ಕಾರದ ಹೊಸ ನಿರ್ಧಾರವೇನು?

ಹಿಂದಿನ ಸರೆಂಡರ್ ಮೌಲ್ಯದ ಮಾನದಂಡಗಳ ಪ್ರಕಾರ ನಾಲ್ಕು ವರ್ಷಗಳ ಅನಂತರ ಪಾಲಿಸಿ ಬಿಟ್ಟರೆ ಒಟ್ಟು 2 ಲಕ್ಷ ರೂ. ಒಟ್ಟು ಪ್ರೀಮಿಯಂನ ಶೇ. 50 ಅಂದರೆ 1.2 ಲಕ್ಷವನ್ನು ಮತ್ತು 40,000 ರೂ. ಬೋನಸ್ ಪಡೆಯಬಹುದು. ಈ ವಿಶೇಷ ಸರೆಂಡರ್ ಮೌಲ್ಯದಿಂದ 1.55 ಲಕ್ಷ ರೂ. ಗಳನ್ನು ಮರಳಿ ಪಡೆಯಬಹುದಾಗಿದೆ. ಎಲ್ಲಾ ವಿಮಾ ಕಂಪನಿಗಳು ಈ ಹೊಸ ಸರೆಂಡರ್ ಮೌಲ್ಯದ ಮಾನದಂಡವನ್ನು ಅನುಸರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.