Thursday, 12th December 2024

Lily Philips: ಒಂದೇ ದಿನ ಬರೋಬ್ಬರಿ 100 ಪುರುಷರೊಂದಿಗೆ ಲೈಂಗಿಕ ಕ್ರಿಯೆ- ಸೋಶಿಯಲ್‌ ಮೀಡಿಯಾ ಸ್ಟಾರ್‌ ಕೊನೆಗೆ ಅಳುತ್ತಾ ಹೇಳಿದ್ದೇನು?

Lily Philips

ಓನ್ಲಿ ಫ್ಯಾನ್ಸ್ ಮಾಡೆಲ್ ಲಿಲಿ ಫಿಲಿಪ್ಸ್(Lily Philips) ಒಂದೇ ದಿನದಲ್ಲಿ 100 ಪುರುಷರೊಂದಿಗೆ ಮಲಗುವ ಮೂಲಕ ಸುದ್ದಿಯಾಗಿದ್ದರು. ಆದರೆ 101 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಈ ಮಾಡೆಲ್ ಇದೀಗ 24 ಗಂಟೆಗಳಲ್ಲಿ 1,000 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಹೊಸ ಸವಾಲನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಆದರೆ ಅದನ್ನು ಪ್ರಯತ್ನಿಸಲು ಬೇರೆ ಯಾರಿಗೂ ಶಿಫಾರಸು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ, ಫಿಲಿಪ್ಸ್ ತನ್ನ ಅನುಭವವನ್ನು ಹೇಳಿಕೊಳ್ಳುವಾಗ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೊವನ್ನು ಸಾಕ್ಷ್ಯಚಿತ್ರ ತಯಾರಕ ಜೋಶುವಾ ಪೀಟರ್ಸ್ ಚಿತ್ರೀಕರಿಸಿದ್ದಾರಂತೆ. “ನಾನು ಇದರ ಬಗ್ಗೆ ತುಂಬಾ ಖುಷಿಯಾಗಿದ್ದೇನೆ.ನನ್ನಿಂದ ಇನ್ನು ಕಾಯಲು ಸಾಧ್ಯವಿಲ್ಲ 24 ಗಂಟೆಗಳಲ್ಲಿ 1000 ಪುರುಷರೊಂದಿಗೆ ಮಲಗುವುದು ತುಂಬಾ ರೋಮಾಂಚನಕಾರಿಯಾಗಿದೆ. ಇದು ವಿಶ್ವ ದಾಖಲೆಯಾಗಲಿದೆ. ಇದೊಂದು ನಿಜವಾದ ಸವಾಲು” ಎಂದಿದ್ದಾರೆ. ಹಾಗೇ ಅವರು ಇದನ್ನು ದೊಡ್ಡ ಗೋದಾಮಿನಲ್ಲಿ ನಡೆಸಲಿದ್ದಾರಂತೆ.

ಯೂಟ್ಯೂಬ್‍ನಲ್ಲಿ ಪೋಸ್ಟ್ ಮಾಡಲಾದ ಫಿಲಿಪ್ಸ್‌ ಅವರ ಸಾಕ್ಷ್ಯಚಿತ್ರವನ್ನು ಲಂಡನ್‍ನ ಎರಡು ಬೆಡ್ ರೂಂ ಏರ್‍ಬಿಎನ್‍ಬಿಯಲ್ಲಿ ಚಿತ್ರೀಕರಿಸಲಾಗಿದೆ. ಸ್ಟಂಟ್ ನಂತರ, ಫಿಲಿಪ್ಸ್ ಅವರನ್ನು ಅನುಭವ ಹೇಗಿತ್ತು ಎಂದು ಕೇಳಲಾಗಿದೆ. ವಿಡಿಯೊದಲ್ಲಿ, ಫಿಲಿಪ್ಸ್ ಇದು ‘ದುರ್ಬಲರಿಗೆ ಅಲ್ಲ’ ಮತ್ತು ಅದನ್ನು ಯಾರಿಗೂ ಶಿಫಾರಸು ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಹಾಸಿಗೆಯ ಮೇಲೆ ಗುಲಾಬಿ ಹೂಗಳಿಂದ ತುಂಬಿದ ಕೋಣೆಯಲ್ಲಿ ಸ್ಟಂಟ್  ಮಾಡುವುದನ್ನು ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. ಚಲನಚಿತ್ರ ನಿರ್ಮಾಪಕರು ನಿಮಗೆ ಹೇಗನಿಸುತ್ತಿದೆ ಎಂದು ಕೇಳಿದಾಗ, ಫಿಲಿಪ್ಸ್ ಇದು ವಿಭಿನ್ನ ಭಾವನೆ ಎಂದು ಹೇಳಿದ್ದಾರೆ. ನಂತರ ಅವರು ಅಳುತ್ತಾ ತನಗೆ ಒಂದು ನಿಮಿಷ ಕಾಲಾವಕಾಶ ನೀಡುವಂತೆ ಚಿತ್ರ ತಂಡವನ್ನು ಕೇಳಿದ್ದಾರೆ.

ಒಬ್ಬ ವ್ಯಕ್ತಿಗೆ ಕೇವಲ ಒಂದೆರಡು ನಿಮಿಷಗಳಿಗೆ ಮಾತ್ರ ಈ ಆಫರ್‌ ನೀಡಲಾಗಿದೆಯಂತೆ. ಹಾಗಾಗಿ ಪುರುಷರಿಗೆ ‘ಉತ್ತಮ ಸಮಯ’ ನೀಡಲು ಆಗದೇ ಇರುವುದಕ್ಕೆ ತುಂಬಾ ಬೇಸರವಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: ಈ ವಿವಾಹ ಆಮಂತ್ರಣ ಪತ್ರಿಕೆ ನೋಡಿದ್ರೆ ಹೊಟ್ಟೆ ಹುಣ್ಣಾಗುವ ಹಾಗೇ ನಗುತ್ತೀರಿ; ಅಂಥದ್ದೇನಿದೆ ಇದರಲ್ಲಿ?

ಓನ್ಲಿ ಫ್ಯಾನ್ಸ್ ತಾರೆಯ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿರುವ ನೆಟ್ಟಿಗರು ಈ ವಿಡಿಯೊಗೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ಈ ಸಾಕ್ಷ್ಯಚಿತ್ರವು ಮನುಷ್ಯನಾಗಿ ನೋಡಲು ವಿನಾಶಕಾರಿಯಾಗಿದೆ” ಎಂದು ಒಬ್ಬ ನೆಟ್ಟಿಗರು  ಹೇಳಿದರೆ, ಇನ್ನೊಬ್ಬರು, “ಅಂತ್ಯವು ಇದರ ವಾಸ್ತವತೆಯನ್ನು ತೋರಿಸುತ್ತದೆ. ಅವಳ ಮಾನಸಿಕ ಆರೋಗ್ಯ ಹದಗೆಟ್ಟಿದೆ” ಎಂದು ಕಿಡಿಕಾರಿದ್ದಾರೆ.