ರಾಯಪುರ: ಛತ್ತಿಸ್‌ಗಢ ರಾಜ್ಯದ ಬಾಲೋದ ಜಿಲ್ಲೆಯ ಘುಮಕಾ ಗ್ರಾಮದಲ್ಲಿ ಗ್ರಾಮಸ್ಥರಿಂದ ಸಾರಾಯಿ ನಿಷೇಧ ಘೋಷಿಸ ಲಾಗಿದೆ.
ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡಿದರೆ, ೫೧ ಸಾವಿರ ರೂಪಾಯಿ ದಂಡ ಭರಿಸುವ ನಿಯಮ ಮಾಡಲಾಗಿದೆ. ಸಾರಾಯಿ ಮಾರಾಟದ ಕಡೆಗೆ ನಿಗಾ ವಹಿಸಲು ೩ ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಸಾರಾಯಿ ಕುಡಿಯುವುದರಿಂದ ಆಗುವ ಅಪರಾಧಗಳನ್ನು ತಡೆಯುದಕ್ಕಾಗಿ ಗ್ರಾಮಸ್ಥರು ಈ ನಿರ್ಣಯ ತೆಗೆದುಕೊಂಡಿದ್ದಾರೆ.
ಸರಪಂಚ ಮಿಲಾಪ ಸಿಂಹ ಠಾಕೂರ ಅವರು, ಗ್ರಾಮದ ಪ್ರತಿ ಮನೆಯ ಒಬ್ಬ ವ್ಯಸನಾ ಧೀನನಾಗಿದ್ದರು. ಇದರಿಂದ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತೊಂದರೆ ಸಹಿಸಬೇಕಾ ಗುತ್ತಿತ್ತು. ಮಹಿಳೆಯರು ಮಾಡಿರುವ ವಿನಂತಿಯ ಮೇರೆಗೆ ಗ್ರಾಮದಲ್ಲಿ ಸಾರಾಯಿ ನಿಷೇಧಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.